ಉತ್ತರ ಕನ್ನಡ : ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಜನ್ಮ ದಿನಾಚರಣೆ ಹಾಗೂ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚಣೆಯನ್ನು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಈ ಎರಡು ನಾಯಕರು ಭಾರತಕ್ಕೆ ಕೊಟ್ಟ ಕೊಡುಗೆಯನ್ನು ಮನಸಾರೆ ನೆನೆಸಿ, ಜಗತ್ತಿನಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅವರ ತತ್ವ-ಸಿದ್ದಂಥ ಜೀವಂತವಾಗಿರಲಿ ಅಂತ ಪ್ರಾರ್ಥಿಸಲಾಯಿತು.
ಗಾಂಧೀ ಜಯಂತಿ ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಕಥೆ ಮತ್ತು ಯೋಗ ಪ್ರದರ್ಶನ ಕಾರ್ಯಕ್ರಮ ಬಾಡದ ಹುಬನಣಗೇರಿಯಲ್ಲಿ ನಡೆಯಿತು.
ಎಸ್.ಜಿ.ಎಸ್ ಕಾಲೇಜ್ ಭಟ್ಕಳದಲ್ಲಿ ಸ್ವಚ್ಛತಾ ಕಾರ್ಯಕ್ರಮ.
ಹೊನ್ನಾವರ ತಾಲೂಕಿನ ಗುಣಗುಣಿ ಶಾಲೆಯಲ್ಲಿ ಕಾರ್ಯಕ್ರಮ
ಶಿರಸಿಯ ಯಡಳ್ಳಿಯ ಸೊಸೈಟಿಯ ಹಾಗು ಪಂಚಾಯತಿಸುತ್ತಮುತ್ತಲಿನ ಪ್ರದೇಶಗಳನ್ನು ಊರನಾಗರಿಕರಿಂದ ಹಾಗು ಬಿ.ಜೆ.ಪಿ. ಕಾರ್ಯಕರ್ತರಿಂದ ಸ್ವಚ್ಛತೆ ಕಾರ್ಯಕ್ರಮ ಕೈಗೊಳ್ಳಲಾಯಿತು. ಡಿ. ಆರ್ ಭಟ್ , ಜಿ.ಆರ್ ಹೆಗಡೆ . ರವಿ ಹೆಗಡೆ, ಸತ್ಯನಾರಾಯಣ ಹೆಗಡೆ , ಯೋಗಿಶ ಭಟ್ , ವಿಶ್ವನಾಥ ಹೆಗಡೆ ಸಾತ್ವಿಕ ಹಾಗೂ ವಿಘ್ಙೆಶ್ವರ ಇನ್ನು ಮುಂತಾದವರು.ಹಾಗೂ ಸೊಸೈಟಿಯ ಸಿಬ್ಬಂದಿಗಳು ಭಾಗವಹಿಸಿದರು.
ಕಾರವಾರ ನಗರದ ಶಾಸಕರ ಕಾರ್ಯಾಲಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮಂಗಳವಾರದಂದು ರಾಷ್ಟಪಿತ ಮಹಾತ್ಮ ಗಾಂಧಿ ಜಯಂತಿ ಹಾಗೂ ದೇಶದ ಸರಳ ಸಜ್ಜನಿಕೆಯ ಪ್ರಧಾನ ಮಂತ್ರಿ ಲಾಲಬಹೂದ್ದುರ ಶಾಸ್ತ್ರೀ ಅವರ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ ಪೂಜೆ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಿಶನ ಕಾಂಬ್ಳೆ, ಕವನ ಕುಮಾರ, ಗುರುಪ್ರಸಾದ್ ನಾಯ್ಕ್, ಸಮೀತ ನೇತಲಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಯಲ್ಲಾಪುರ: ನಗರದ ಅನೇಕ ನಾಗರಿಕ ಬಂಧುಗಳು ಸಂಘ ಸಂಸ್ಥೆಗಳು ಹಾಗೂ ಇತರೇ ಇಲಾಖೆಗಳ ಸಹಕಾರದಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿಯವರ ಮಹತ್ತ್ವಾಕಾಂಕ್ಷೆಯ ” ಸ್ವಚ್ಛತಾ ಹೀ ಸೇವಾ “ಕಾರ್ಯಕ್ರಮದ ಅಂಗವಾಗಿ ಈ ದೀನ ಜೋಡು ಕೇರೆ ಹತ್ತಿರ ,ಜಿಲ್ಲಾ ಪಂಚಾಯತ್ ಕಚೇರಿ, ಮಂಜುನಾಥ ನಗರದ ರಸ್ತೆ ,ಸರಕಾರಿ ಆಸ್ಪತ್ರೆ ಎದುರು, ಸ್ವಚ್ಛತಾಕಾರ್ಯಕ್ರಮ ನಡೆಯಿತು.
ಕುಮಟಾ ಸಿಂಡ್ ಆರ್ ಸಿಟಿ ವತಿಯಿಂದ ಸುತ್ತ ಮುತ್ತಲಿನ ಪರಿಸರವನ್ನ ಸ್ವಚ್ಛಗೊಳಿಸಲಾಯಿತು.
ಗಾಂಧಿಜಯಂತಿ ಅಂಗವಾಗಿ ಕಾರವಾರದ ದೇವಳಮಕ್ಕಿಯ ಆದರ್ಶ ವಿದ್ಯಾಲಯದಲ್ಲಿ ಕಾರ್ಯಕ್ರಮ.
ಬ್ಲಾಕ್ ಕಾಂಗ್ರೆಸ್ ಕುಮಟಾ ಇಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿ. ಎಲ್. ನಾಯ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ತಾರಾ ಗೌಡ , ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸುರೇಖಾ ವಾರೀಕರ್, ಆರ್. ಹೆಚ್. ನಾಯ್ಕ, ಪುರಸಭಾ ಸದಸ್ಯರು ಮುಂತಾದ ಪ್ರಮುಖರು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು..