ಕಾರವಾರ: ಚೀಟಿ ಬರೆದಿಟ್ಟು ಆಟೊ ರಿಕ್ಷಾ ಚಾಲಕ ನಾಗೇಶ್ ಚಿಪ್ಕಾರ್ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಾಡದಲ್ಲಿ ನಡೆದಿದೆ.

RELATED ARTICLES  ಜನ್ಮ ನೀಡಿದ ತಂದೆತಾಯಿಯರ ಋಣ ತೀರಿಸಲಾಗದು: ರಾಘವೇಶ್ವರ ಶ್ರೀ

ಬಾಡದ ಮಹಾದೇವಸ್ಥಾನದ ಹಿಂಭಾಗದಲ್ಲಿರುವ ತಮ್ಮ ಮನೆಯಲ್ಲೇ ನಾಗೇಶ್ ಚಿಪ್ಕಾರ್ ಅವರು ನೇಣು ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಾವಿಗೂ ಮುನ್ನ ಅವರು ಬರೆದಿಟ್ಟಿರುವ ಚೀಟಿಯಲ್ಲಿ, ನನ್ನ ಮರಣಕ್ಕೆ ನಾನೇ ಕಾರಣ ಎಂದು ಉಲ್ಲೇಖಿಸಿದ್ದಾರೆ.

RELATED ARTICLES  ಅಪಘಾತ : ಓರ್ವ ಸಾವು : ಇಬ್ಬರು ಗಂಭೀರ.

ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಬಗ್ಗೆ ವಿವರ ಲಭ್ಯವಾಗಿಲ್ಲ. ಪೋಲೀಸ್ ತನಿಖೆ ನಂತರದಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಲಿದೆ.