ಹೊನ್ನಾವರ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಕಾರವಾರ, ಶಂಭುಲಿಂಗೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮೂಡ್ಕಣಿ, ತಾಲೂಕ ಯುವ ಒಕ್ಕೂಟ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿಯಂದು ಮೂಡ್ಕಣಿಯಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ನಿತೀನ್ ನಾಯ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರೆಲ್ಲಾ ಸೇರಿ ಸಂಘದ ಆವರಣ ಹಾಗೂ ಅಂಗನವಾಡಿ ಕೇಂದ್ರ ಪಶು ಚಿಕಿತ್ಸಾಲಯದ ಸುತ್ತ ಮುತ್ತ ಸ್ವಚ್ಛಗೊಳಿಸಿದರು.
ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ, ಸಂಘದ ಸದಸ್ಯರಾದ ಕೃಷ್ಣ ನಾಯ್ಕ, ಮೇಘರಾಜ ಆಚಾರಿ, ಗಣೇಶ ನಾಯ್ಕ, ಕಮಲಾಕರ ಅಂಬಿಗ, ಪ್ರಕಾಶ, ಸ್ಮಿತಾ ನಾಯ್ಕ ಸಂಘದ ಸದಸ್ಯರು ಭಾಗಿಯಾದರು.
ವರದಿ: ಎಂ ಎಸ್ ಶೋಭಿತ್ ಮೂಡ್ಕಣಿ