ಶ್ರೀನಗರ : ಭಾರತೀಯ ಸೇನಾ ಪಡೆಯು ಜಮ್ಮು ಕಾಶ್ಮೀರದ ಪೊಲೀಸರೊಂದಿಗೆ ಸೇರಿ, ದೋಡಾ ಜಿಲ್ಲೆಯಲ್ಲಿನ ಉಗ್ರರ ಬೃಹತ್ ಅಡಗುದಾಣವನ್ನು ಪತ್ತೆ ಹಚ್ಚಿದ್ದು, ಅಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ ,ಇವುಗಳಲ್ಲಿ ಎರಡು ಎಕೆ ರೈಫಲ್ಗಳು, 355 ಸುತ್ತಿನ ಮದ್ದುಗುಂಡುಗಳು, ಒಂದು ಯುಬಿಜಿಎಲ್ ಗ್ರೆನೇಡ್ ಲಾಂಚರ್, ನಾಲ್ಕು ಚೀನೀ ಗ್ರೆನೇಡ್ ಗಳು ಸೇರಿವೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನು ಖಚಿತ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಖುದ್ದಾರ್ ಪ್ರದೇಶದ ಭಗವಾಹ್ ಬ್ಲಾಕ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಇದರ ಪರಿಣಾಮವಾಗಿ ಉಗ್ರರ ಬೃಹತ್ ಅಡಗುದಾಣ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾದವು ಎಂದು ತಿಳಿದುಬಂದಿದೆ.