ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ (1 ರಿಂದ 10 ನೇ ತರಗತಿ) 2018-19 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು 30.10.2018 ಕೊನೆಯ ದಿನಾಂಕವೆಂದು ತಿಳಿಸಲಾಗಿತ್ತು. ಆದರೆ ಅರ್ಜಿ ತುಂಬಲು ಕೊನೆಯ ದಿನಾಂಕವನ್ನು 15/10/2018 ರ ವರೆಗೆ ಹಿಂದೂಡಲಾಗಿದೆ. ಇದನ್ನು ಎಲ್ಲಾ ಪಾಲಕರೂ ಗಮನಿಸಬೇಕೆಂದು ತಿಳಿಸಲಾಗಿದೆ.
ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್ (SSP) ದಿನಾಂಕವನ್ನು 31/10/2018 ರ ವರೆಗೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.