ಭಟ್ಕಳ: ಹೊಟ್ಟೆಯಲ್ಲಿ ಹುಳು ಇರೋದು ನಮಗೆ ಗೊತ್ತು, ಕೆಲವೊಮ್ಮೆ ಏನೆಲ್ಲಾ ವಿಚಿತ್ರ ಗಟಿಸಿಬಿಡುತ್ತೆ ಎಂಬುದಕ್ಕೆ ಇದೊಂದು ನೈಜ ಘಟನೆ ಎನ್ನ ಬಹುದು. ಇದು ನಡೆದಿದ್ದು ಉತ್ತರ ಕನ್ನಡದ ಭಟ್ಕಳದಲ್ಲಿ. ಇಷ್ಟು ದೊಡ್ಡ ಹುಳು ಕಣ್ಣಿನಲ್ಲಿ ಬೆಳೆದಿರುವುದು ದೇಶದಲ್ಲೇ ಅತಿ ವಿರಳ ಪ್ರಕರಣ ಎನ್ನಲಾಗಿದೆ.

ವ್ಯಕ್ತಿಯೊಬ್ಬರು ಬಹಳ ಕಾಲದಿಂದ ಕಣ್ಣು ನೋವಿನಿಂದ ಬಳಲುತ್ತಿದ್ದರು ನಂತರ ಪರೀಕ್ಷಿಸಿದಾಗ ಆ ವ್ಯಕ್ತಿಯ ಕಣ್ಣಿನಲ್ಲಿ ಬರೋಬ್ಬರೀ 15 ಸೆಂ.ಮೀ. ಉದ್ದದ ಹುಳುವಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ನೋವು ತಡೆಯಲಾರದೆ ಕುಂದಾಪುರದ ಖಾಸಗಿ ನೇತ್ರಾಲಯದ ನೇತ್ರತಜ್ಞ ಡಾ.ಶ್ರೀಕಾಂತ ಶೆಟ್ಟಿ ಅವರ ಬಳಿ ಪರೀಕ್ಷಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಪಾಸಣೆ ನಡೆಸಿದ ನೇತ್ರತಜ್ಞ ಡಾ.ಶ್ರೀಕಾಂತ ಶೆಟ್ಟಿ ಬಲಗಣ್ಣಿನ ಒಳಗೆ 15 ಸೆಂ.ಮೀ. ಉದ್ದದ ಜೀವಂತ ಹುಳುವನ್ನು ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಜೀವಂತವಾಗಿ ಹೊರ ತೆಗೆದಿದ್ದಾರೆ. ಚಿಕಿತ್ಸೆಗೊಳಗಾದ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ.

RELATED ARTICLES  ಸ್ವರ್ಣವಲ್ಲೀ ಶ್ರೀಗಳ ಪಾದಪೂಜೆ ಮತ್ತು ಭಿಕ್ಷಾ ವಂದನಾ ಸೇವೆ ಸಲ್ಲಿಸಿದ ಅನಂತಮೂರ್ತಿ ಹೆಗಡೆ.

ಸೊಳ್ಳೆ ಕಚ್ಚಿದ ಪರಿಣಾಮ ಈ ರೀತಿ ಆಗಿರ ಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ವಿಚಿತ್ರ ಪ್ರಕರ್ಣ ಜನತೆಯ ಆತಂಕಕ್ಕೆ ಕಾರಣವಾಗಿತ್ತು.

RELATED ARTICLES  ಕಾರ್ಡ ಮಾಡಿಸಲು ಬಂದಾತ ಯಮನ ಪಾದ ಸೇರಿದ: ಆಯುಷ್ಮಾನ್ ಕಾರ್ಡ ಗೆ ಬಂದವನ ಆಯಸ್ಸು ಮುಗೀತು.

ವರದಿ: ವಿವೇಕ ಭಟ್ಕಳ.