ಅಂಕೊಲಾ : ತಾಲೂಕಿನ ಗೋಕುಲ ಲಾಡ್ಜ್ ಬಳಿ ಬಸ್ಸ ಬಡಿದು ಬೈಕ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಕೆ.ಎಸ್ .ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಸಾವಿಗೀಡಾದ ಬೈಕ್ ಸವಾರನನ್ನು ಸ್ಥಳೀಯ ನಿವಾಸಿ ಎಂದು ಗುರುತಿಸಲಾಗಿದೆ.
ತೀವ್ರವಾಗಿ ತಲೆಗೆ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿ ಸಾವನಪ್ಪಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಓವರ್ ಟೇಕ್ ಮಾಡುವ ವೇಳೆ ಅಪಘಾತ ಸಂಭವಿಸಿರ ಬಹುದೆಂಬ ಬಗ್ಗೆ ವಿವರ ಸಿಕ್ಕಿದೆ ಎನ್ನಲಾಗಿದೆ.
KA 30V 1989 ಬೈಕ್‌ಸಂಖ್ಯೆಯ ಬೈಕ್ ಅಪಘಾತವಾಗಿದ್ದು ಸವಾರನ ಕಾಲು ಮುರಿದಿದೆ ಹಾಗೂ ತಲೆ ಪಕ್ಕದ ಕಲ್ಲಿಗೆ ಬಡಿದು ಪ್ರಾಣ ಪಕ್ಷಿ ಹಾರಿದೆ ಎಂಬಂತೆ ಸ್ಥಿತಿ ಇದೆ ಎನ್ನಲಾಗಿದೆ.
ಪೋಲೀಸರು ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಸಮಗ್ರ ಮಾಹಿತಿ ಹಾಗೂ ಕಾರಣಗಳು ತಿಳಿಯಬೇಕಾಗಿದೆ.