ದಿನಾಂಕ :04/10/2018 ರಂದು, ಜಿಲ್ಲಾ ಆಡಳಿತ, ಜಿಲ್ಲಾಪಂಚಾಯತ್ ಉತ್ತರ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಾರ್ಯಾಲಯ (ಉ. ಕ.) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ 14 ವರ್ಷ ವಯೋಮಿತಿ ಒಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸಂಪನ್ನವಾಯಿತು.
ಕ್ರೀಡಾಕೂಟವನ್ನು ಭಟ್ಕಳ ಹೊನ್ನಾವರ ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿ
ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆ ಯುವಜನರ ಚೇತನವಾಗಬೇಕು ಎಂದು
ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಜಿ.ಪಂ ಸದಸ್ಯರಾದ ಶ್ರೀ ಶಿವಾನಂದ ಹೆಗಡೆ ಮಾತನಾಡಿ ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಮೊಬೈಲ್ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮದಿಂದ ದೂರವಿರಿ ಎಂದು ತಿಳಿಸಿದರು.
ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರೀ ಮಾತನಾಡಿ
ವಿದ್ಯಾರ್ಥಿ ಜೀವನವೆಂದರೆ ಆಟ, ಪಾಠ ,ಮನೋರಂಜನೆ ನೆನಪಾಗುತ್ತದೆ. ವಿದ್ಯಾರ್ಥಿಗಳೆಂದರೆ ಕೇವಲ ಓದುತ್ತಾ ಇರುವವರು ಮಾತ್ರವಲ್ಲ, ದೈಹಿಕವಾಗಿ ಕೂಡ ದಂಡನೆ ಇರಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ ಎನ್ನುವುದು ತಪ್ಪು, ಪಾಠದ ಜೊತೆಗೆ ಆಟ ವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶಿವಾನಂದ ಹೆಗಡೆ, ಶ್ರೀಕಲಾ ಶಾಸ್ತ್ರಿ , ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಹಾಗೂ ಇನ್ನಿತರರು ಹಾಜರಿದ್ದರು.