ಕುಮಟಾ :- ಕರ್ನಾಟಕ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ 2018–19ನೇ ಸಾಲಿನ ಇಲಾಖಾ ಕ್ರೀಡಾಕೂಟದಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಅಮೋಘ ಸಾಧನೆಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇಂದು ದಿನಾಂಕ 04/10/2018 ಗುರುವಾರ ಹೊನ್ನಾವರದ ಸೆಂಟ್ ಅಂಥೋನಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಈ ಸಾಧನೆ ಮಾಡಿರುತ್ತಾರೆ.
ಕು.ನಯನಾ ರಾಮಕೃಷ್ಣ ಭಟ್ಟ 100ಮೀ ಓಟದಲ್ಲಿ ಹಾಗೂ 200ಮೀ.ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಎರಡೂ ಸ್ಪರ್ಧೆಯಲ್ಲಿಯೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲಾ ಮಟ್ಟಕ್ಕೆ ಇತಿಹಾಸ ನಿರ್ಮಿಸಿದ್ದಾಳೆ. ಅನನ್ಯಾ ಅರುಣ ಕಾಮತ 400ಮೀ.ಓಟದಲ್ಲಿ ಪ್ರಥಮಸ್ಥಾನ ಪಡೆದು ಸಾಧನೆ ಮಾಡಿದರೆ ಗಗನ ಎನ್ ನಾಯ್ಕ ಬಾಲಕರ 100ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕಿಯರ 4 * 100ಮೀ ರೀಲೇಯಲ್ಲಿ ಸರಸ್ವತಿ ವಿದ್ಯಾಕೇಂದ್ರದಿಂದ ಕುಮಟಾ ತಾಲೂಕನ್ನು ಪ್ರತಿನಿಧಿಸಿದ್ದ ಅನನ್ಯಾ ಅರುಣ ಕಾಮತ,ನಯನಾ ಭಟ್ಟ,ಗಾಯತ್ರಿ ಗುನಗ,ಸೌಮ್ಯ ಪಟಗಾರ ಇವರುಗಳ ತಂಡ ಪ್ರಥಮ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿಗಳಾಗಿ ಕರ್ನಾಟಕ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆ ರಜತ ಸಂಭ್ರಮದಲ್ಲಿರುವ ಸಂಸ್ಥೆಗೆ ಅತ್ಯಂತ ಮಹತ್ವದ್ದೆನಿಸಿದ್ದು ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ತರಬೇತುಗೊಳಿಸಿದ ದೈಹಿಕ ಶಿಕ್ಷಕರಾದ ಶ್ರೀಮತಿ ಸುಮಂಗಲಾ ನಾಯ್ಕ,ಈಶ್ವರ ಗೌಡ,ಜಯರಾಜ ಶೇರುಗಾರ,ನಾಗರಾಜ ಭಂಡಾರಿಯವರನ್ನು ಶಾಲಾ ವಿಶ್ವಸ್ಥಮಂಡಳಿ ಹಾಗೂ ಮುಖ್ಯ ಶಿಕ್ಷಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. ಶಾಲಾ ಹಿತೈಶಿಗಳು ಈ ಸಾಧನೆಗಳು ಮುಂದುವರಿಯಲೆಂದು ಶುಭ ಹಾರೈಸಿರುತ್ತಾರೆ.