ಮಹಾರಾಷ್ಟ್ರದ ಖಾನಪುರದಲ್ಲಿ CISCE ಸಂಘದ ವತಿಯಿಂದ ನಡೆದ ರಾಷ್ಟ್ರಮಟ್ಟದ ಕೋಕೋ ಸ್ಪರ್ಧೆಯಲ್ಲಿ ಬೆಂಗಳೂರಿನ ಹಂಪಿನಗರದಲ್ಲಿರುವ

ಶ್ರೀಭಾರತೀ ವಿದ್ಯಾಲಯದಿಂದ ಶ್ರೇಯಾ ಕಾಶಿದ್ ಹಾಗೂ ನಿಹಾರಿಕಾ ಇವರು ದ್ವಿತೀಯ ಸ್ಥಾನ (Runner up ) ಪ್ರಶಸ್ತಿ ಪಡೆದಿದ್ದಾರೆ.
ಈರ್ವರು ಬಾಲೆಯರು ಬಹುಮುಖ ಪ್ರತಿಭೆಗಳಾಗಿದ್ದಾರೆ. ಕ್ರೀಡೆಯ ಜೊತೆ ಜೊತೆ ಭರತನೃತ್ಯ , ಸಂಗೀತ ಹಾಗೂ ಇನ್ನಿತರ ಕಲಾಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೇ ಶಾಲೆಯ ಕುಮಾರಿ ದೀಪ್ತಿ ಸಿ. ಇವಳು CISCE ಯವರು 17 ವರ್ಷದೊಳಗಿನ ಮಕ್ಕಳಿಗಾಗಿ ಅಹ್ಮದಾಬಾದ್ ನಲ್ಲಿ ನಡೆಸಿದ್ದ ರಾಷ್ಟ್ರ ಮಟ್ಟದ ಟೆಕ್ವೊಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ಈ ಪ್ರತಿಭೆಗಳನ್ನು ಶಾಲಾ ಆಡಳಿತ ಮಂಡಳಿ , ಶಿಕ್ಷಕರು ಹಾಗೂ ಪಾಲಕ ಪೋಷಕರು ಅಭಿನಂದಿಸಿದ್ದಾರೆ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇವೆ.