ನವದೆಹಲಿ : ಭಾರತಕ್ಕೆ ಎರಡು ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ , ಅವರಿಂದು ಭಾರತದೊಂದಿಗೆ ರಕ್ಷಣಾ ಪರಿಕರ ಖರೀದಿಯ ಮಹತ್ವದ ಒಪ್ಪಂದಕ್ಕೆ ಸಹಿಹಾಕಲಿದ್ದಾರೆ.
ಅಮೆರಿಕ ಮತ್ತು ಚೀನ, ಭಾರತದಲ್ಲಿ ಪುಟಿನ್ ಅವರ ನಡೆ-ನುಡಿ-ವಹಿವಾಟನ್ನು ಗಮನಿಸುತ್ತಿದೆ.
ನಿರ್ಬಂಧದ ಬೆದರಿಕೆ ನಡುವೆಯೂ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಭರ್ಜರಿ ಒಪ್ಪಂದಗಳಿಗೆ ಸಹಿ ಹಾಕಲು ದಿಟ್ಟ ಹೆಜ್ಜೆ ಇಟ್ಟಿರುವ ಭಾರತ ಅಮೆರಿಕಕ್ಕೆ ಸೆಡ್ಡು ಹೊಡೆದಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದೊಂದಿಗೆ ಎಸ್ 400 ಟ್ರಯಂಫ್ ಯುದ್ದವಿಮಾನಗಳ ಖರೀದಿ ಒಪ್ಪಂದ ಮಾಡಿಕೊಳ್ಳಲಿದ್ದು, ನೆರರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳಿಗೂ ನಡುಕ ಉಂಟು ಮಾಡಿದೆ.
ಶಸ್ತ್ರಾಸ್ತ್ರ ಉತ್ಪನ್ನದ ಬಹುದೊಡ್ಡ ಕಾರ್ಖಾನೆ ಎನಿಸಿರುವ ಅಮೆರಿಕ, ಅವನ್ನು ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡಿ ವರ್ಷಕ್ಕೆ ಲಕ್ಷಾಂತರ ಕೋಟಿ ಡಾಲರ್ ಸಂಪಾದನೆ ಮಾಡುತ್ತ ಬಂದಿದೆ. ಈ ವಿಷಯದಲ್ಲಿ ಭಾರತವು ಅಮೆರಿಕದ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರ ಎನಿಸಿ ಅದರ ಸ್ನೇಹ ಗಿಟ್ಟಿಸಿದೆ.
ಆದರೆ, ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ಅಮೆರಿಕದ ಮಾತನ್ನು ಮೀರಿ. ತಮಗೆ ಅನುಕೂಲವಾಗುವ ಒಪ್ಪಂದಗಳಿಗೆ ಸಹಿ ಹಾಕಲು ರಷ್ಯಾ ಜೊತೆ ಸಂಧಾನ ನಡೆಸಿದ್ದಾರೆ.