ಹೊನ್ಮಾವರ: ಹೊನ್ನಾವರದ ಸೆಂಟ್ ಅಂಥೋನಿ ಕ್ರೀಡಾಂಗಣದಲ್ಲಿ ನಡೆದ 2018-19 ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಕೆನರಾ ವೆಲ್ ಫೇರ್ ಟ್ರಸ್ಟ್‌ನ, ದಿನಕರ ಪ್ರಾಥಮಿಕ ಶಾಲೆ, ಧಾರೇಶ್ವರದ ವಿದ್ಯಾರ್ಥಿ ಗಿರೀಶ್ ಜೆ. ಪಟಗಾರ ಎತ್ತರಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಇವನಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಯೋಗೇಶ್ ಪಟಗಾರರವರು ತರಬೇತಿ ನೀಡಿದ್ದು ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯಾಧ್ಯಾಪಕರು, ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭಕೋರಿದ್ದಾರೆ..