ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕೆಪಿಸಿ ಬಸ್ ಪಲ್ಟಿಯಾದ ಘಟನೆ ತಾಲೂಕಿನ ಕೊಡ್ಸಳ್ಳಿ ಗ್ರಾಮದಲ್ಲಿ ಬಳಿ ಶನಿವಾರ ನಡೆದಿದೆ.
ಘಟನೆಯಿಂದಾಗಿ ಬಸ್ ನಲ್ಲಿದ್ದ ಎಂಟು ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಚಾಲಕನ ನಿಯತ್ರಣ ತಪ್ಪಿದ ಪರಿಣಾಮ ಬಸ್ ಏಕಾಏಕಿ ಪಲ್ಟಿಯಾಗಿದೆ ಎನ್ನಲಾಗಿದೆ.ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ಎಂಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಎಲ್ಲರನ್ನು ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಗಮಕ್ಕೆ ಸೇರಿದ ಬಸ್ ಇದಾಗಿದ್ದು, ಕದ್ರಾದಿಂದ ಕೊಡ್ಸಳ್ಳಿಗೆ ತೆರಳುತ್ತಿರುವಾಗ ಘಟನೆ ಸಂಬವಿಸಿದೆ ಎನ್ನಲಾಗಿದೆ.
ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.