ಯಲ್ಲಾಪುರ: ಹಿರಿಯ ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್ಟ ಅವರಿಗೆ ಶಿಷ್ಯರು ಹಾಗೂ ಅಭಿಮಾನಿಗಳು ಸೇರಿ ಸನ್ಮಾನಿಸಿದ ವಿದ್ವಾನ್-ಗಾನ-ಸಂಮಾನ ಕಾರ್ಯಕ್ರಮದಲ್ಲಿ ಖರ್ಚು ವೆಚ್ಚಗಳನ್ನು ಹೊರತುಪಡಿಸಿ ಉಳಿದ ಒಂದು ಲಕ್ಷ ರೂಪಾಯಿಯನ್ನು ವಿದ್ವಾನರಿಗೆ ಹಸ್ತಾಂತರಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ವಿದ್ವಾನ್ ಅಭಿನಂದನಾ ಸಮಿತಿಯ ಪ್ರಮುಖರು, ವಿದ್ವಾನರ ಶಿಷ್ಯರು, ಅಭಿಮಾನಿಗಳು ಹಾಗೂ ಕಲಾಸಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಕಾರ್ಯಕ್ರಮದಲ್ಲಿ ಸನ್ಮಾನದ ಜೊತೆಗೆ ವಿದ್ವಾನರಿಗೆ ಒಂದು ಲಕ್ಷ ರೂ ಗೌರವಧನ ನೀಡಲಾಗಿತ್ತು. ನಂತರ ಕಾರ್ಯಕ್ರಮದ ಖರ್ಚು-ವೆಚ್ಚಗಳ ಪರಿಶೀಲನೆಯ ನಂತರ ಮತ್ತೂ ಒಂದು ಲಕ್ಷ ರೂ ಉಳಿದಿದೆ. ಅದನ್ನೂ ವಿದ್ವಾನರಿಗೆ ಸಮರ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಅದರಂತೆ ಕಳೆದ ಅ.3 ರಂದು ಸಮಿತಿಯ ಪ್ರಮುಖರ ಉಪಸ್ಥಿತಿಯಲ್ಲಿ ವಿದ್ವಾನರಿಗೆ ಚೆಕ್ ಹಸ್ತಾಂತರಿಸಲಾಗಿದೆ. ವಿದ್ವಾನರ ಮೇಲಿನ ಅಭಿಮಾನದಿಂದ ಸಾರ್ವಜನಿಕರು,ಅಭಿಮಾನಿಗಳು ನೀಡಿದ ದೇಣಿಗೆ ವಿದ್ವಾನರಿಗೇ ಸಲ್ಲಬೇಕೆಂದು ಈ ತೀರ್ಮಾನ ಮಾಡಲಾಗಿದೆ ಎಂದು ಸಮಿತಿಯ ಪ್ರಮುಖರಾದ ಡಾ.ಡಿ.ಕೆ.ಗಾಂವ್ಕಾರ್, ಅನಂತ ಹೆಗಡೆ ದಂತಳಿಗೆ ತಿಳಿಸಿದ್ದಾರೆ.