ಕುಮಟಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಉತ್ತರ ಕನ್ನಡ ಜಿಲ್ಲೆ ,ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬೃಹತ್ ಜನಜಾಗೃತಿ ಜಾಥಾ ಹಾಗೂ ದುಶ್ಚಟದ ವಿರುದ್ಧ ಜಿಲ್ಲಾ ಮಟ್ಟದ ಬೃಹತ್ ಜನಜಾಗೃತಿ ಕಾರ್ಯಕ್ರಮ ಹಾಗೂ
‘ಗಾಂಧೀ ಸ್ಮೃತಿ ಮತ್ತು ವ್ಯಸನಮುಕ್ತರ ಸಮಾವೇಶ’ ಯಶಸ್ವಿಯಾಗಿ ಸಂಪನ್ನವಾಯಿತು.
ಕುಮಟಾದ ಹೊಸ ಬಸ್ ನಿಲ್ದಾಣದಿಂದ ಶಾಂತಿಕಾ ಪರಮೇಶ್ವರಿ ದೇವಾಲಯದ ಸನಿಹದ ವರೆಗೆ ಸಾಗಿದ ಜಾಥಾದಲ್ಲಿ ಸಹಸ್ರಾರು ಮಹಿಳೆಯರು ಭಾಗವಹಿಸಿ ಗಮನ ಸೆಳೆದರು. ದುಶ್ಚಟಗಳಿಂದಾಗುವ ತೊಂದರೆಗಳು ಹಾಗೂ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಘೋಷಣೆಗಳು ಮೊಳಗಿದವು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮೀನಾಕುಮಾರಿ ಪಟಗಾರ ಸಂದೇಶ ನೀಡಿ ದುಶ್ಚಟಗಳ ದಾಸರಾಗಿ ಬದುಕನ್ನು ಕಳೆದುಕೊಂಡವರ ಬಗ್ಗೆ ಹಾಗೂ ಅವರ ಕುಟುಂಬದವರು ಎದುರಿಸ ಬೇಕಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹತ್ವದ ಅಂಶಗಳಲ್ಲಿ ಒಂದಾದ ದುಶ್ಚಟದ ವಿರುದ್ಧದ ಜಾಗ್ರತಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನ ಜಾಗ್ರತಿ ಸಮೀತಿಯ ಗಂಗಾಧರ ಭಟ್ಟ, ನಂದಕುಮಾರ್ ಹಾಗೂ ಮುಂತಾದವರು ಇದ್ದರು.