ಕುಮಟಾ: ಉತ್ತಮ ಕಾರ್ಯಯೋಜನೆಯ ಮೂಲಕ ಕುಮಟಾದ ವಿವೇಕ ನಗರ ವಿಕಾಸ ಸಂಘದ ಆಶ್ರಯದಲ್ಲಿ ಸಂಘದ ಸೇವಾ ಚಟುವಟಿಕೆಗಳ ಸಹಾಯಾರ್ಥ ಹವ್ಯಕ ಸಭಾಭವನದಲ್ಲಿ ಸಂಘಟಿತವಾದ ‘ಭೀಷ್ಮ ವಿಜಯ ‘ ಎಂಬ ಪೌರಾಣಿಕ ಯಕ್ಷಗಾನ ಯಕ್ಷ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅದಷ್ಟೇ ಅಲ್ಲದೇ ರೂಪಿತವಾದ ಕಾರ್ಯಯೋಜನೆ ಹಾಗೂ ಅಲ್ಲಿನ ವ್ಯವಸ್ಥೆಗಳು ಜನ ಮೆಚ್ಚುಗೆಗಳಿಸಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಕೇಶವ ಹೆಗಡೆ ಕೊಳಗಿ, ಶ್ರೀ ಸರ್ವೇಶ್ವರ ಹೆಗಡೆ ಮೂರೂರು. ಮದ್ದಳೆ ಶ್ರೀ ಶಂಕರ ಭಾಗ್ವತ ಯಲ್ಲಾಪುರ, ಚಂಡೆಯಲ್ಲಿ ಶ್ರೀ ಗಣೇಶ ಗಾಂವಕರ ಯಲ್ಲಾಪುರ ರವರು ಸಮರ್ಥವಾಗಿ ಸಾರಥ್ಯ ವಹಿಸಿದರೆ,
ಮುಮ್ಮೇಳದಲ್ಲಿ ಶ್ರೀ ಅಶೋಕ ಭಟ್ ಉಜಿರೆ – ಭೀಷ್ಮ, ಶ್ರೀ ವಿದ್ಯಾಧರ ಜಲವಳ್ಳಿ – ಸಾಲ್ವನಾಗಿ
ಶ್ರೀ ಉಮಾಕಾಂತ ಭಟ್ಟ ಕೆರೆಕೈ -ಪರುಶುರಾಮನಾಗಿ
ಪ್ರೊ. ಪ್ರದೀಪ ಸಾಮಗ ಬೆಂಗಳೂರು- ಅಂಬೆಯಾಗಿ ಹಾಗೂ ಶ್ರೀ ಮಹಾವೀರ ಜೈನ್, ರಾಘವ ಕಾಮನಮಕ್ಕಿ ಹಾಗೂ ಹಾಸ್ಯದಲ್ಲಿ ಶ್ರೀ ಶ್ರೀಧರ ಹೆಗಡೆ ಚಪ್ಪರಮನೆ ಈ ಮುಂತಾದ ಕಲಾವಿದರು ಯಕ್ಷ ರಸಿಕರ ಮನ ಗೆದ್ದರು.
IMG 20181007 WA0000

ಸಮಾಜಕ್ಕಾಗಿ ಸಂಘಟಿತವಾದ ಜನರು.

ಈ ಸಂಘಟನೆ ಎಲ್ಲ ಸಂಘಟನೆಗಳಿಗಿಂತ ತುಂಬಾ ವಿಭಿನ್ನವಾಗಿ ಗುರ್ತಿಸಿಕೊಳ್ಳುತ್ತಿದೆ.
ಸಾಮಾಜಿಕ ಸಂಬಂಧಗಳ ಸುಧಾರಣೆ,ಸಂಸ್ಕ್ರತಿ ಪರಂಪರೆಗಳ ರಕ್ಷಣೆ, ಪರಿಸರ ಸ್ವಚ್ಛತೆಯ ಅರಿವು, ಅಬಾಲವೃಧ್ದರಾದಿಯಾಗಿ, ಉಪಯುಕ್ತವಾಗುವ ಸಮಾಜಮುಖಿ ಕಾರ್ಯಕ್ರಮಗಳ ಮುಖಾಂತರ ಈಗಾಗಲೇ ಕುಮಟಾ ಪಟ್ಟಣದಲ್ಲಿ ಗುರುತಿಸಿಕೊಂಡಿರುವ ವಿವೇಕನಗರ ವಿಕಾಸ ಸಂಘವು ಭವಿಷ್ಯದ ದಿನಗಳಲ್ಲಿ ಕೂಡ ಹತ್ತು ಹಲವು ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

RELATED ARTICLES  ಕಾಲುಜಾರಿ ಹಳ್ಳಕ್ಕೆ ಬಿದ್ದು ರೈತ ಸಾವು.

ಸತತವಾಗಿ ಕಾರ್ಯಮುಖೀ ಸಂಘಟನೆ.

ಸತತ ಒಂದು ವರ್ಷಗಳ ಕಾಲ ಎಡೆಬಿಡದೆ ಕುಮಟಾದ ವಿವೇಕನಗರವನ್ನು ಸ್ವಚ್ಛವಾಗಿಡುವ ಕುರಿತು ಈ ಸಂಘಟನೆ ಕಾರ್ಯನಿರ್ವಹಿಸುತ್ತಿದೆ.

ಪ್ರತೀ ವಾರ ಗಾಳಿ ಮಳೆ ಚಳಿ ಗಳನ್ನು ಲೆಕ್ಕಿಸದೆ ಕಾರ್ಯಕರ್ತರು ತಾವೇ ಸ್ವತಃ ಬೀದಿ ಬೀದಿ ಗಳಿಗೆ ಹೋಗಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದು ಅಷ್ಟೇ ಅಲ್ಲದೆ ತಾವೇ ಸ್ವತಃ ಕಸ ತೆಗೆಯುವ ಮೂಲಕ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸಿದ ಸಂಘಟನೆ ಇದಾಗಿದೆ.

ಕೇವಲ ಭಾಷಣದಲ್ಲಿ ,ಮಾತಿನಲ್ಲಿ ಮಾತ್ರ ಸ್ವಚ್ಛತೆಯ ಬಗ್ಗೆ ಹೇಳದೇ ಪ್ರತಿವಾರ ಕಾರ್ಯಕರ್ತರು ಸ್ವಚ್ಛತೆಗೆ ಕೈ ಜೋಡಿಸುತ್ತಿರುವುದು ಸ್ಥಳೀಯರು ಹಾಗೂ ತಾಲೂಕಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

IMG 20181007 WA0001

ಸಮರ್ಥರ ಮುಂದಾಳತ್ವದ ಸಂಘಟನೆ

ಸಂಘಟನೆಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಅತ್ಯುತ್ತಮ ರೀತಿಯಲ್ಲಿ ಸಂಘಟಿಸುತ್ತಿರುವ ಈ ವಿವೇಕ ನಗರ ವಿಕಾಸ ಸಂಘಕ್ಕೆ ಸಮರ್ಥ ನಾಯಕರು ಮತ್ತು ನಿರ್ದೇಶಕ ಮಂಡಳಿಯನ್ನು ಹೊಂದಿದೆ.

RELATED ARTICLES  ಲವ್ ಜಿಹಾದ್ ಭೀಷಣ ಸಮಸ್ಯೆಗಳ ನಿವಾರಣೋಪಾಯ ಮಾಡಬೇಕೆಂದು ಮನವಿ

ಡಾ.ಎಮ್‌.ಆರ್.ನಾಯಕ -ಅಧ್ಯಕ್ಷರು

ಎಸ್.ಐ.ನಾಯ್ಕ – ಉಪಾಧ್ಯಕ್ಷರು

ದತ್ತಾತ್ರೇಯ ಭಟ್ -ಕಾರ್ಯದರ್ಶಿ

ವಿ.ವಿ.ಹೊಸಕಟ್ಟಾ-ಖಜಾಂಚಿ

ಕೆ.ಎಸ್.ಭಟ್ಟ -ಸಹ ಕಾರ್ಯದರ್ಶಿ

IMG 20181007 WA0002 1

ನಿರ್ದೇಶಕರುಗಳು.
ಶ್ರೀ ಜಯದೇವ ಬಳಗಂಡಿ, ಆರ್.ಎನ್.ಪಟಗಾರ,ಡಾ.ಡಿ.ಡಿ.ಭಟ್ಟ , ಮಹಾಬಲೇಶ್ವರ ಹೆಬ್ಬಾರ,ಅರುಣ ಹೆಗಡೆ , ತಿಮ್ಮಪ್ಪ ಮುಕ್ರಿ , ಸಂಜಯ ಪಂಡಿತ,ಗಣೇಶ ಪಟಗಾರ,ಮಂಜುನಾಥ ಗೌಡ ,ಕುಮಾರ ಕವರಿ,ಮಂಜು ಮುಕ್ರಿ, ಎಮ್.ಜಿ.ಕಾಗಾಲ ಇವರುಗಳು ಸಮರ್ಥವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ‌ ಪ್ರಯತ್ನಿಸುತ್ತಿದೆ ಸಂಘಟನೆ.

ಪ್ಲಾಸ್ಟಿಕ್ ಮುಕ್ತ ಸಮಾಜದ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿರುವ ಈ ಸಂಘಟನೆ ಯಕ್ಷಗಾನದಲ್ಲಿಯೂ ಈ ಬಗ್ಗೆ ಒಂದು ಮಹತ್ವದ ಹೆಜ್ಜೆ ಇಟ್ಟು ಗಮನ ಸೆಳೆಯಿತು. ಯಕ್ಷಗಾನದ ಟಿಕೆಟ್ ಪಡೆದು ಯಕ್ಷಗಾನದ ಸಭಾಭವನ ಪ್ರವೇಶಿಸುವ ಜನರಿಗೆ ಕಾಟನ್ ಬಟ್ಟೆಯ ಚೀಲಗಳನ್ನು ನೀಡುವ ಮೂಲಕ ಜನ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಜನ ಜಾಗ್ರತಿ ಕಾರ್ಯಗಳು, ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಕಾರ್ಯಗಳ ಮೂಲಕ ಜನ ಮೆಚ್ಚುಗೆ ಗಳಿಸಿರುವ ಈ ಸಂಘಟನೆ ಮುಂಬರುವ ದಿನಗಳಲ್ಲಿ ಹೊಸ ಕನಸು ಹೊತ್ತು ಮುನ್ನಡೆಯಲಿದೆ ಈ ಕುರಿತು ಮುಂಬರುವ ದಿನಗಳಲ್ಲಿಯೂ ಸಮಸ್ತ ಜನತೆಯ ಸಹಕಾರ ಬಯಸುತ್ತಿದೆ.

IMG 20181007 WA0005