ಕಾರವಾರ: ತೋಟದಲ್ಲಿ ತೆಂಗಿನ ಸಸಿ ನೆಡುವ ಕಾರ್ಯದಲ್ಲಿ ತೊಡಗಿದ್ದ ರೈತರೊಬ್ಬರಿಗೆ ಹಾವು ಕಡಿದ ಪರಿಣಾಮ ಮೃತಪಟ್ಟ ಘಟನೆ ತಾಲೂಕಿನ ಹಬ್ಬುವಾಡಾದಲ್ಲಿ ಸಂಭವಿಸಿದೆ.
ಮೃತಪಟ್ಟ ರೈತರನನ್ನು ತಾಲೂಕಿನ ಬೇಳೂರಿನ ಕುಮಾರ್ ದೇವು ಗೌಡ(56) ಎಂದು ಗುರುತಿಸಲಾಗಿದೆ.
ಬೇಳೂರಿನ ಕುಮಾರ್ ದೇವು ಗೌಡ ಅವರು ಹಬ್ಬುವಾಡಾದ ತೋಟದಲ್ಲಿ ತೆಂಗಿನ ಸಸಿಗಳನ್ನು ನೆಡುತ್ತಿದ್ದರು. ಅದೇ ಸಂದರ್ಭದಲ್ಲಿ ವಿಷಕಾರಿ ಹಾವು ಕಿಚ್ಚಿದೆ ಎನ್ನಲಾಗಿದೆ.
ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಗುವ ಪ್ರಯತ್ನ ನಡೆಸಿದರೂ ದಾರಿ ಮಧ್ಯವೇ ಮೃತಪಟ್ಟಿದ್ದಾರೆ. ಹಾವಿನ ಬಾಯಿಗೆ ರೈತ ಬಲಿಯಾಗುತ್ತಿದ್ದಂತೆ ಜನತೆ ಭಯ ಗೊಂಡರು. ಕುಟುಂಬದವರು ಪ್ರಾಣ ಉಳಿಸಲು ಹರ ಸಾಹಸ ಪಟ್ಟರಾದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಈ ಬಗ್ಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.