ಶಿರಸಿ:ತಾಲೂಕಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಕಾರ್ಯಕರ್ತೆ ಪೈರ್ ಬ್ರಾಂಡ್ ಚೈತ್ರಾ ಕುಂದಾಪುರ “ಮಸೀದಿ ಹಾಗೂ ಚರ್ಚ್ ಗಳು ಪ್ರಾರ್ಥನಾ ಮಂದಿರವಲ್ಲ. ಅವುಗಳಿಗೂ ದೇವಸ್ಥಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು” ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಇವರು ಉತ್ತರಿಸಿದರು.
ಹಿಂದೂ ಧರ್ಮದಲ್ಲಿ ಅನೈತಿಕ ಸಂಬಂಧಕ್ಕೆ ಯಾವುದೇ ಅವಕಾಶವಿಲ್ಲ. ನಾವು ಮರ್ಯಾದಾ ಪುರುಷ ಶ್ರೀರಾಮನನ್ನೇ ಇಂದೂ ಪೂಜಿಸುತ್ತೇವೆ. ಕೋರ್ಟ ತೀರ್ಪು ನಮ್ಮ ಹಿಂದೂ ಹೆಣ್ಣು ಮಕ್ಕಳ ಜೀವನ ಶೈಲಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಿಂದ ಸಂಕಷ್ಟವೇ ಹೆಚ್ಚು ಹೊರತು ಲಾಭಗಳಿಲ್ಲ. ಸುಪ್ರೀಂ ಕೋರ್ಟ್ ಇನ್ನೊಮ್ಮೆ ವಿಚಾರ ಮಾಡುವುದು ಒಳಿತು ಎಂದರು.
ಪ್ರತಿ ದೇವಸ್ಥಾನಕ್ಕೂ ಅದರದೇ ಆದ ವಿಶೇಷತಗಳಿದೆ. ಕೆಲವೊಂದು ಕಡೆ ಗಂಡು ಮಕ್ಕಳಿಗೂ ಪ್ರವೇಶವಿಲ್ಲ. ಹಲವಾರು ದೇವಸ್ಥಾನದಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶವಿದೆ. ಆ ನಿಟ್ಟಿನಲ್ಲಿ ದೇವಸ್ಥಾನದ ಪಾವಿತ್ರ್ಯತೆ ಉಳಿಸುಕೊಳ್ಳುವತ್ತ ಹೋರಾಟ ನಡೆಸುತ್ತಿದ್ದೇವೆ ಎಂದು ಶಬರಿಮಲೈನಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು.
ಬಿಜೆಪಿಯವರನ್ನು ನಂಬಿ ನಾವು ಹಿಂದುತ್ವ ಮಾಡುತ್ತಿಲ್ಲ. ಶಬರಿ ಮಲೈ ತೀರ್ಪಿನ ವಿರುದ್ಧದ ಹೋರಾಟಕ್ಕೆ ಬಿಜೆಪಿಯವರು ಮಾತ್ರವಲ್ಲದೇ ಶಬರಿ ಮಲೈ ಅಯ್ಯಪ್ಪ ಸ್ವಾಮಿಗೆ ಹಾರ ಹಾಕುವ ಕಾಂಗ್ರೆಸ್ಸಿಗರೂ ಬೆಂಬಲ ನೀಡಲಿ ಎಂದರು.