ಯಲ್ಲಾಪುರ: ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ಇಂಜನೀಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದ ತಾಲೂಕಿನ ಇಡಗುಂದಿ ಸಮೀಪದ ಗುಡೇಪಾಲಿನ ಪದ್ಮಶ್ರಿ ಮಂಜುನಾಥ ಭಟ್ಟ ಇವಳು ಎಂ.ಬಿ.ಎ ದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಪಡೆದುಕೊಂಡು ಅಪೂರ್ವ ಸಾಧನೆ ಮಾಡಿದ್ದಾಳೆ.ಇವರು ಪದ್ಮಶ್ರೀ ಭಟ್ಟ ಗುಡೇಪಾಲಿನ ಮಂಜುನಾಥ ಅಣ್ಣಯ್ಯ ಭಟ್ಟ ಮತ್ತು ಮಂಗಲಾ ಇವರ ಪುತ್ರಿಯಾಗಿದ್ದಾಳೆ.
ಈಕೆ ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ಇಂಜನೀಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು 2017-18 ನೇ ಸಾಲಿನ ಚಿನ್ನದ ಪದಕಕ್ಕೆ ಭಾಜನಳಾಗಿದ್ದಾಳೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶೋಧ ಟೊಯೋಟಾದ ಸಿಇಓ ಆರ್.ಜಿ.ಕುಲಕರ್ಣಿ ಪ್ರಶಸ್ತಿ ಪ್ರಧಾನ ಮಾಡಿದರು. ಈಕೆಯ ಸಾಧನೆಗೆ ಕುಟುಂಬ ವರ್ಗ ಹಾಗೂ ಆಪ್ತರು ಸಂತಸ ಪಟ್ಟರು. ಸಮಸ್ತ ಜನತೆ ಅಭಿನಂದನೆ ಸಲ್ಲಿಸಿದೆ.