ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದ ಆಡಳಿತ ಸರ್ಕಾರ ವಶಪಡಿಸಿಕೊಂಡಿದ್ದನ್ನು ಪುನಃ ರಾಮಚಂದ್ರಾಪುರ ಮಠಕ್ಕೆ ನೀಡಬೇಕೆಂದು ಸರ್ವೋಚ್ಛ ನ್ಯಾಯಾಲಯದ ತೀರ್ಪು ಪ್ರಕಟವಾಗಿ ಒಂದು ವಾರ ಕಳೆಯುತ್ತಾ ಬಂದರೂ ಸರ್ಕಾರ ಮಠಕ್ಕೆ ಆಡಳಿತ ಹಸ್ತಾಂತರ ಮಾಡುವ ಬಗ್ಗೆ ಮೀನಾಮೇಶ ಎಣಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇಂದೂ ಸಹ ಹಸ್ತಾಂತರ ಮಾಡಲು ಬಂದ ಅಧಿಕಾರಿಗಳು ಅರ್ಧಕ್ಕೇ ವಾಪಸ್ಸಾಗಿ ಭಕ್ತರಲ್ಲಿದ್ದ ಅನುಮಾನಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.

IMG 20181009 WA0002

ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ದಿನಾಂಕ 06.10.2018 ರಂದು ತಾಲ್ಲೂಕು ಅಧಿಕಾರಿಗಳಿಗೆ ಗೋಕರ್ಣ ಮಹಾಬಲೇಶ್ವರ ದೇವಾಲಯದ ಸಮಗ್ರ ಆಡಳಿತವನ್ನು ಹಸ್ತಾಂತರಿಸುವಂತೆ ಸೂಚಿಸಿದ್ದು, ಆ ಆದೇಶದ ಅನ್ವಯ ನಿನ್ನೆ (08.10.2018) ಕುಮಟಾ ತಾಲ್ಲೂಕು ಅಧಿಕಾರಿಗಳು ಶ್ರೀಮಠದ ಅಧಿಕಾರಿಗಳಿಗೆ ಪತ್ರ ಬರೆದು ಇಂದು (09.10.2018) ಬೆಳಗ್ಗೆ 10ಗಂಟೆಗೆ ಹಸ್ತಾಂತರ ಮಾಡುತ್ತೇವೆ ಸಿದ್ಧರಾಗಿರಿ ಎಂದು ತಿಳಿಸಿರುತ್ತಾರೆ.

ಅದರಂತೆ, ಇಂದು ಬೆಳಗ್ಗೆ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ದೇವರ ಆಭರಣಗಳನ್ನು ಹಸ್ತಾಂತರ ಮಾಡುವ ಮಧ್ಯೆ, ಬಂದ ‘ದೂರವಾಣಿ ಕರೆಯ’ ಆದೇಶದ ಮೇರೆಗೆ ಪ್ರಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಿರುತ್ತಾರೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ, ಅದನ್ನು ಅನುಸರಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ, ಕುಮಟಾ ತಾಲ್ಲೂಕು ಅಧಿಕಾರಿಗಳಿಂದ ಹಸ್ತಾಂತರ ಪತ್ರ ಇವೆಲ್ಲವುಗಳು ಇದ್ದರೂ… ನಡೆದಿದ್ದ ಹಸ್ತಾಂತರ ಪ್ರಕ್ರಿಯೆಯನ್ನು ನಿಲ್ಲಿಸಿರುತ್ತಾರೆ!

RELATED ARTICLES  ಹೊನ್ನಾವರದಲ್ಲಿ ತಂದೆ ಮಗುವಿಗೆ ಕೊರೋನಾ ಪಾಸಿಟೀವ್ : ಬಾಕಿ ಇದೆ ಮಹಿಳೆಯ ವರದಿ.

ಈ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ. ಈ ಹಿಂದೆ ನ್ಯಾಯಾಲಯ ನೀಡಿದ್ದ ತೀರ್ಪಿನ ಬಗ್ಗೆ ಗೊಂದಲವಿತ್ತು, ಆದರೂ ಅವಸರವಾಗಿ ವಶಕ್ಕೆ ಪಡೆದ ಸರ್ಕಾರ ಈಗೇಕೆ ವಾಪಸ್ ನೀಡುತ್ತಿಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಹಿಂದೆ ಕುಮಟಾ ಕಂದಾಯ ಇಲಾಖೆಯಿಂದ ಈ ಹಿಂದಿನ ಮಠದ ಆಡಳಿತಾಧಿಕಾರಿ ಮತ್ತು ಹಸ್ತಾಂತರ ಪ್ರಕ್ರಿಯೆಗಳನ್ನು ದಾಖಲೀಕರಿಸಲು ಬಂದಿದ್ದ ಚಿನ್ನಾಭರಣ ಮಾಪನಮಾಡಿ ಪರೀಕ್ಷಿಸುವವರನ್ನು ಮತ್ತು ಪೋಟೋ, ವಿಡಿಯೋದವರನ್ನಾ ರವಿವಾರ ಮುಂಜಾನೆ 9 ಘಂಟೆಗೆ ಬರುವಂತೆ ತಿಳಿಸಿದ್ದರು. ಇದಾದ ಕೆಲವೆ ಘಂಟೆಗಳಲ್ಲಿ ಪುನಃ ದೂರವಾಣಿ ಕರೆ ಮಾಡಿ ನಾಳೆ ಬರವುದು ಬೇಡ ಸರ್ಕಾರದಿಂದ ಆದೇಶ ಪತ್ರ ಬರಬೇಕಿದೆ ಎಂದಿದ್ದಾರೆ ಎಂದು ವರದಿಯಾಗಿತ್ತು .

ಆದರೆ ಸರ್ಕಾರದಿಂದ ಸೂಚನೆ ಬರುವ ಮೊದಲೆ ಕಂದಾಯ ಇಲಾಖೆಯವರು ತಿಳಿಸಿದ್ದಾರಾ? ಅಥವಾ ನಂತರ ಸರ್ಕಾರದ ನಿರ್ಧಾರ ಬದಲಾಗಿದೆಯೇ ಎಂಬುದು ಸಂದೇಹ ಮೂಡಿಸಿತ್ತು.

ಆದರೆ ಇಂದು ಸಹ ಇದೇ ಪ್ರಕ್ರಿಯೆ ಮುಂದುವರಿದು ಸರಕಾರದ ಉದ್ಧಟತನದ ಪ್ರದರ್ಶನವಾಗಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಇಂದು ಗೋಕರ್ಣ ಹಸ್ತಾಂತರಿಸುವ ಕುರಿತಾಗಿ ತಹಶೀಲ್ದಾರರು ಹಾಗೂ ಕೆಲ ತಾಲೂಕಾಡಳಿತದ ಅಧಿಕಾರಿಗಳು ಗೋಕರ್ಣಕ್ಕೆ ಬಂದು ಮಠಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಆದರೆ ನಂತರದ ಕೆಲವೇ ಕ್ಷಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಹಸ್ತಾಂತರ ಪ್ರಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಿ ವಾಪಸ್ಸಾಗಿದ್ದಾರೆ ಎನ್ನಲಾಗಿದೆ. ಇದು ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಸುಪ್ರೀಂ ಆದೇಶ ಪಾಲಿಸಿ
ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಹಸ್ತಾಂತರಿಸಲು ಸರಕಾರಕ್ಕೆ ಯಾವ ತೊಡಕಿದೆ ಎಂಬ ಬಗ್ಗೆ ಪ್ರಶ್ನೆಗಳು ಈ ಮೊದಲು ಎದ್ದಿತ್ತಾದರೂ ಇದೀಗ ಅದು ಸರಕಾರದ ಯಾವೂದೋ ಕಾಣದ ಕೈ ಈ ಪ್ರಕ್ರಿಯೆ ತಡೆಯುತ್ತಿದೆಯೇ ಅಥವಾ ಸರಕಾರಕ್ಕೆ ಯಾರೋ ಒತ್ತಡ ಹೇರುತ್ತಿದ್ದಾರೆಯೇ ಎಂಬ ಬಗ್ಗೆ ಸಂಶಯಗಳು ಬಲವಾಗುತ್ತಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.

RELATED ARTICLES  ಗೇರು ಸಂಸ್ಕರಣ ಘಟಕ ನಿರ್ಮಿಸಲು ವಿರೋಧ: ಶಾಸಕರಿಗೆ ಮನವಿ ಸಲ್ಲಿಸಿದ ಹಳದೀಪುರದ ಕುದಬೈಲ ಹಾಗೂ ಇಂದಿರಾನಗರದ ನಿವಾಸಿಗಳು.

ಮುಜರಾಯಿ ಇಲಾಖೆಯಿಂದ ಆದೇಶ ಬರುವವರೆಗೆ ಹಸ್ತಾಂತರ ಇಲ್ಲ ಎಂಬ ಬಗ್ಗೆ ಡಿ.ಸಿ ಎಸ್ ಎಸ್ ನಕುಲ್ ಹೇಳುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ಆದೇಶದ ವರೆಗೆ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂಬುದಾಗಿಯೂ ಗೋಕರ್ಣಕ್ಕೆ ಬಂದ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂಬುದು ವರದಿಯಾಗಿದೆ. ಆದರೂ ಮುಜರಾಯಿ ಇಲಾಖೆ ಸುಪ್ರೀಂ ತೀರ್ಪನ್ನೂ ಕಡೆಗಣಿಸುತ್ತಿದೆಯೇ? ಎಂಬ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಸರಕಾರಕ್ಕೇ ಯಾರೋ ಒತ್ತಡ ಹೇರುತ್ತಿದ್ದಾರಾ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿರುವುದು ಸುಳ್ಳಲ್ಲ.

ರಾಜಕೀಯ ಒತ್ತಡ ಸುಪ್ರೀಂ ಕೋರ್ಟಿನ ಆದೇಶಕ್ಕಿಂತ ಮಿಗಿಲಾಯಿತೇ?ಎನ್ನುತ್ತಿದ್ದಾರೆ ಸಾರ್ವಜನಿಕರು.