ಕುಮಟಾ:ಸಾಹಿತ್ಯ, ಭಾಷೆಗೆ ಸಂಬಂಧಿಸಿದಂತೆ ಉತ್ತಮ ಚಟುವಟಿಕೆ ನಿರ್ವಹಿಸಿದ ತಾಲ್ಲೂಕು ಘಟಕಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಹಿಂದೆಯೇ ಹೇಳಿದಂತೆ ಪ್ರಶಸಸ್ತಿಯನ್ನು ನಿಗದಿಪಡಿಸಲಾಗಿದ್ದು, ಅದನ್ನು ‘ಸಾಹಿತ್ಯ ಸಾರಥ್ಯ ಪ್ರಶಸ್ತಿ’ ಎಂದು ಗುರುತಿಸಲಾಗಿದೆ. ಈ ಬಾರಿಯ ‘ಸಾಹಿತ್ಯ ಸಾರಥ್ಯ ಪ್ರಶಸ್ತಿ’ಗೆ ಕುಮಟಾ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆಯಾಗಿದೆ.
2017- 18ನೇ ಸಾಲಿನ ‘ಸಾಹಿತ್ಯ ಸಾರಥ್ಯ ಪ್ರಶಸ್ತಿ’ಗೆ ಕುಮಟಾ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
. 2017- 18ನೇ ಸಾಲಿನಲ್ಲಿ ಕುಮಟಾ ಘಟಕ ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಅರ್ಹತೆ ಪಡೆದುಕೊಂಡಿದೆ ಎಂದು ಅವರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ತಿಳಿಸಿದ್ದಾರೆ.
ಪ್ರಶಸ್ತಿಯು, 10 ಸಾವಿರ ನಗದು ಮತ್ತು ಅಭಿನಂದನಾ ಫಲಕವನ್ನು ಒಳಗೊಂಡಿದೆ. ಈಗಾಗಲೇ 2016- 17ನೇ ಸಾಲಿನ ಪ್ರಶಸ್ತಿಗೆ ಭಟ್ಕಳ ತಾಲ್ಲೂಕು ಘಟಕವನ್ನು ಆಯ್ಕೆ ಮಾಡಲಾಗಿತ್ತು. ಈ ಎರಡೂ ತಾಲ್ಲೂಕುಗಳಿಗೆ ಪ್ರಶಸ್ತಿಯನ್ನು ನ.11ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕ್ರಿಯಾಶೀಲ ಕಾರ್ಯಕ್ರಮಗಳು ಹಾಗೂ ವೈವಿದ್ಯಮಯ ಕಾರ್ಯಗಳ ಮೂಲಕ ಕುಮಟಾ ಕನ್ನಡ ಸಾಹಿತ್ಯ ಪರಿಷತ್ ಗುರುತಿಸಿಕೊಂಡಿತ್ತು. ಡಾ .ಶ್ರೀಧರ ಉಪ್ಪಿನ ಗಣಪತಿ ಅವರ ಅಧ್ಯಕ್ಷತೆಯಲ್ಲಿ , ಶ್ರೀ ಮಂಜುನಾಥ ನಾಯ್ಕ ಹಾಗೂ ಶ್ರೀ ಚಿದಾನಂದ ಭಂಡಾರಿಯವರು ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.