ಕುಮಟಾ ; ಭಾರತ ಯುವಕರ ದೇಶ, ಮುವತ್ತೈದು ವಯಸ್ಸಿಗಿಂತ ಕಡಿಮೆ ವಯಸ್ಸಿನ ಯುವಕರು ಭಾರತದಲ್ಲಿ ಎಪ್ಪತ್ತು ಕೋಟಿಯಷ್ಟಿದ್ದು, ಹಲವು ದೇಶಗಳ ಒಟ್ಟು ಜನಸಂಖ್ಯೆಗಳಿಗೆ ಸಮವಾಗಿದೆ. ಅಪೇಕ್ಷಿತ ಸಾಧನಗಳನ್ನು ಮಾಡಲು ನಮಗೆ ಸಾಧ್ಯವಾಗದೇ ಇರುವುದರಿಂದ, ಯುವಶಕ್ತಿಯನ್ನು ಸದ್ಭಳಕೆ ಮಾಡುವ ಸದುದ್ದೇಶದಿಂದ ಎನ್.ಎಸ್.ಎಸ್. ಸ್ಥಾಪನೆಯಾಗಿದೆ. ಅದರ ಪ್ರಯೋಜನ ಪಡೆಯಿರಿ. ಎಂದು ಹೊನ್ನಾವರ ಎಸ್.ಡಿ.ಎಂ. ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರಾದ ಡಾ|| ಎಮ್.ಆರ್.ನಾಯಕ ಹೇಳಿದರು.

ಅವರು ಕುಮಟಾ ಹಳಕಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರದ 2ನೇ ದಿನದ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳನ್ನು ಉದ್ಧೇಶಿಸಿ ಮಾನವೀಯ ಮೌಲ್ಯಗಳ ಕುರಿತು ಮಾತನಾಡುತ್ತಾ, ಕೇವಲ ನುಡಿಗೆ ಎನೂ ಬೆಲೆ ಇಲ್ಲ. ನುಡಿಗೆ ಬೆಲೆ ಬರುವುದು ನಡೆಯಿಂದ ಆದ್ದರಿಂದ ಪರೋಪಕಾರ, ಸೇವೆ, ದಯೆ, ಅಹಿಂಸೆ ಮುಂತಾದ ಮಾನವೀಯ ಮೌಲ್ಯಗಳಿಗೆ ಬೆಲೆ ಬರುವುದು ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಎಂದು ಹೇಳುತ್ತಾ ರಾಮಾಯಣ-ಮಹಾಭಾರತ-ಪುರಾಣಗಳಿಂದ ಆಯ್ದ ಉದಾಹರಣೆಗಳೊಂದಿಗೆ ಆಧುನಿಕ ಉದಾಹರಣೆಗಳೊಂದಿಗೆ, ವಿದ್ಯಾರ್ಥಿಗಳಿಗೆ ವಿವರಿಸಿದರು.

RELATED ARTICLES  ಭಟ್ಕಳದಲ್ಲಿ ತಾಲೂಕ ಆಡಳಿತ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

ಹುಟ್ಟಿದಾಗ ಉಸಿರಿರುತ್ತದೆ, ಹೆಸರಿರುವುದಿಲ್ಲ, ಸತ್ತಾಗ ಉಸಿರಿರುವುದಿಲ್ಲ, ಹೆಸರಿರುವಂತೆ ಬದುಕಿದ್ದಾಗ ಕೆಲಸ ಕಾರ್ಯಗಳನ್ನು ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಎಸ್.ವಿ.ನಾಯ್ಕ ರವರು ವಹಿಸಿ ಮಾತನಾಡುತ್ತಾ, ಮಾನವೀಯ ಮೌಲ್ಯಗಳು ಅರ್ಥಶಾಸ್ತ್ರದಲ್ಲಿ ಮಾನವ ಬಂಡವಾಳ ವಿಷಯದ ಅಡಿಯಲ್ಲಿ ಚರ್ಚೆಯಾಗಿರುತ್ತದೆ ಎಂದರು.

RELATED ARTICLES  ಸಾವಿರು ನಾಟಕದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದ ರಂಗಕರ್ಮಿ ಇನ್ನಿಲ್ಲ

ಕಾರ್ಯಕ್ರಮದಲ್ಲಿ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಉಷಾ ನಾಯ್ಕ, ಜೀವಶಾಸ್ತ್ರ ಉಪನ್ಯಾಸಕ ಶ್ರೀ ನಾಗೇಶ ಹರಿಕಂತ್ರ, ಉಪನ್ಯಾಸಕ ಶ್ರೀ ಗಣೇಶ ಭಟ್ಟ ಉಪಸ್ಥಿತರಿದ್ದರು.

ಕು. ನವೀನ ದೇವಾಡಿಗ ಸ್ವಾಗತಿಸಿ, ಕು. ಶಾಂತಿಕಾ ಎನ್. ಮುಕ್ರಿ ವಂದಿಸಿದಳು. ಕು. ಜಯರಾಮ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.