ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇಂದು ಬೆಳಗ್ಗೆ 7.05ಕ್ಕೆ ತುಲಾ ಲಗ್ನದಲ್ಲಿ ಚಾಮುಂಡಿ ದೇವಿಗೆ ಅಗ್ರಪೂಜೆ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ನಾರಾಯಣ ಮೂರ್ತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಸಂಸ್ಕೃತಿ ಖಾತೆ ಸಚಿವೆ ಜಯಮಾಲಾ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ ಸಿಂಹ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆನಂತರ ಮಾತನಾಡಿದ ಸುಧಾಮೂರ್ತಿಯವರು, ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ತಮ್ಮ ಸಂತಸ ಹಂಚಿಕೊಂಡರು. ನಮ್ಮ ಕಾಲದಲ್ಲಿ ದಸರಾವನ್ನು ಅಜ್ಜಿ ‘ಮಹಾನವಮಿ ಹಬ್ಬ’ ಎನ್ನುತ್ತಿದ್ದರು. ಹಂಪಿಯಲ್ಲಿ ಇಂದಿಗೂ ಮಹಾನವಮಿ ದಿಬ್ಬವನ್ನು ಕಾಣಬಹುದು. ಮುಂದೆ ಮೈಸೂರು ಮಹಾರಾಜರು ಅದನ್ನು ಮುಂದುವರಿಸಿ ನಾಡಿನ ತುಂಬಾ ದಸರಾ ವೈಭವ ಪಸರಿಸುವಂತೆ ಮಾಡಿದರು. ಈ ವೈಭವದ ಉತ್ಸವವನ್ನು ಉಳಿಸಿ ನಾಡಹಬ್ಬವಾಗಿ ಬೆಳೆಸಿದ್ದಕ್ಕಾಗಿ ನಾವು ಅವರಿಗೆ ಸದಾ ಕೃತಜ್ಞರಾಗಿರಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊಡಗಿನಲ್ಲಿ ನಿರಾಶ್ರಿತರಾದವರಿಗೆ ಮನೆ ಕಟ್ಟಿಕೊಡಲು 25 ಕೋಟಿ ರೂಪಾಯಿಗಳನ್ನು ಕೊಡುವುದಾಗಿ ಸುಧಾಮೂರ್ತಿ ಘೋಷಿಸಿದ್ದಾರೆ.

RELATED ARTICLES  ಮಂಡ್ಯದಲ್ಲಿಒಂದು-ಕ್ಷಣ ಕಂಪಿಸಿದ ಭೂಮಿ: ಶಬ್ಧ ಕೇಳಿ ಮನೆಯಿಂದ ಓಡಿ ಬಂದ ಜನ.

ಮೈಸೂರು ದಸರಾ ಉದ್ಘಾಟನಾ ಭಾಷಣದಲ್ಲಿ ಸುಧಾಮೂರ್ತಿಯವರನ್ನು ಹಾಡಿ ಹೊಗಳಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ತಾಯಿ ಹೃದಯವನ್ನು ಹೊಂದಿರುವ ಸುಧಾಮೂರ್ತಿ ಅವರು ತಾಯಿ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸಿದರೆ, ನಾಡಿನ ಎಲ್ಲಾ ಸಮಸ್ಯೆಗಳು ಬಗೆಹರಿದು ಚಾಮುಂಡೇಶ್ವರಿ ರಕ್ಷಣೆ ನೀಡುತ್ತಾಳೆ. ಈ ಕಾರಣದಿಂದಲೇ ಅವರಿಂದ ಪೂಜೆ ಮಾಡಿಸಲಾಗಿದೆ. ಎಲ್ಲರಿಗೂ ಬೇಕಿರುವುದು ತಾಯಿ ಹೃದಯ, ಕೊಡಗಿನ ಜನರ ಸಮಸ್ಯೆಗೆ ಸ್ಪಂದಿಸಿದ ಸುಧಾಮೂರ್ತಿಯವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸುಧಾಮೂರ್ತಿ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ನಾಡಿನ ಮಹಿಳೆಯರಿಗೆ ನಾವು ನೀಡುವ ಗೌರವ ಎಂದರು.

RELATED ARTICLES  ಬಂಧನಕ್ಕೊಳಗಾದ ಖ್ಯಾತ ಚಿತ್ರ ನಟ ದುನಿಯಾ ವಿಜಯ್: ಪೋಲೀಸರೆದುರೇ ದರ್ಪ ತೋರಿದರಂತೆ!