ಕುಮಟಾ:ಇತ್ತೀಚೆಗೆಕಾರವಾರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದಕ್ರೀಡಾಕೂಟದಲ್ಲಿಇಲ್ಲಿನಕೊಂಕಣಎಜ್ಯುಕೇಶನ್ ಟ್ರಸ್ಟಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದುರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ.

ಕೊಂಕಣದ ಸಿ.ವಿ.ಎಸ್.ಕೆ ಪ್ರಾಢಶಾಲೆಯ ಸಾರ್ಥಕ ಪೈ 100ಮೀ. ಹಾಗೂ ಅನಿರುದ್ಧ ಭಟ್ಟಕೆರೆ 800ಮೀ. ಓಟದ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಯಅತೀ ವೇಗದಓಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ. ಅದಕ್ಕೆ ಪೂರಕವೆಂಬಂತೆ, ಶಾಲೆಯಆದರ್ಶ ನಾಯ್ಕ ಹಾಗೂ ದೀಕ್ಷಾ ನಾಯ್ಕಇವರುಕ್ರಮವಾಗಿತ್ರಿವಿಧಜಿಗಿತ ಮತ್ತುಚದುರಂಗದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ರಾಜ್ಯ ಮಟ್ಟದ ಸ್ಪರ್ಧೆಗೆತಮ್ಮಹೆಸರನ್ನು ದಾಖಲಿಸಿದ್ದಾರೆ. 200ಮೀ. ಓಟದ ಸ್ಪರ್ಧೆಯಲ್ಲಿ ಸಂಕಲ್ಪ ನಾಯಕಈತನು ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆಅರ್ಹನಾಗಿದ್ದಾನಲ್ಲದೆ, ಬಾಲಕಿಯರ 200ಮೀ. ರಿಲೇಯಲ್ಲಿ ಶಾಲೆಯು ದ್ವಿತೀಯ ಸ್ಥಾನಗೈದುಕ್ರೀಡಾಕೂಟದಲ್ಲಿಗಮನಾರ್ಹ ಸಾಧನೆ ಮಾಡಿದೆ.

RELATED ARTICLES  ಎಡಬಿಡದೆ ಸುರಿದ ಮಳೆ ಭಟ್ಕಳದ ಹಲವೆಡೆ ಧರೆಗುರುಳಿದ ವಿದ್ಯುತ್ ಕಂಬಗಳು.

ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ಶೈಲಿಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸುವಲ್ಲಿ ಹೆಸರುವಾಸಿಯಾಗಿರುವ ಕೊಂಕಣಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯು ಈ ಮೂಲಕ ಸಂಸ್ಥೆಯ ಸಾಧನೆಯಕಿರೀಟಕ್ಕೆ ಮತ್ತೊಂದುಗರಿಯನ್ನು ಸೇರಿಸಿದಂತಾಗಿದೆ.

RELATED ARTICLES  ಹುತಾತ್ಮ ಯೋಧರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ ಕುಮಟಾ ಬ್ಲಾಕ್ ಕಾಂಗ್ರೆಸ್

ವಿದ್ಯಾರ್ಥಿಗಳ ಈ ಅಭೂತಪೂರ್ವ ಯಶಸ್ಸಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿಯರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿ, ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.