ಶಿರಸಿ : ತಾಲೂಕಿನ ಕೊರ್ಲಕಟ್ಟಾ ಗ್ರಾಮದಲ್ಲಿ ಹಾಗೂ ಸಿದ್ದಾಪುರ ತಾಲೂಕಿನ ಬಾಳೇಸರದಲ್ಲಿ ನೂತನ ಟವರ್ ಸ್ಥಾಪನೆ ಮಾಡಲಾಗಿದ್ದು, ಸಚಿವ ಹೆಗಡೆ ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ 70 ವರ್ಷದಿಂದ ಜನರಿಗೆ ತಮ್ಮ ಕಾಲ ಮೇಲೆ ಹೇಗೆ ನಿಲ್ಲಬೇಕು ಎಂದು ಸರ್ಕಾರ ತೋರಿಸಿರಲಿಲ್ಲ. ಜನರಿಗೂ ಜವಾಬ್ದಾರಿ ಇದೆ ಅನಿಸಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ಮೇಲೆ‌ ದೇಶದ ಆರ್ಥಿಕತೆ 22 ಲಕ್ಷ ಕೋಟಿ ರೂ.ಗೆ ತಲುಪಿದೆ. ಆರ್ಥಿಕತೆ ಬೆಳೆದು ಜವಾಬ್ದಾರಿ ಅರಿವನ್ನು ಜನರಲ್ಲಿ ಮೂಡಿಸಿದೆ. ದೇಶ ತನ್ನ ಕಾಲ ಮೇಲೆ ನಿಲ್ಲಲು ಪ್ರಾರಂಭಿಸಿದೆ,ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಎಲ್ಲವನ್ನೂ ಕೇಂದ್ರ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

RELATED ARTICLES  ಕೇಂದ್ರ ಸರ್ಕಾರವು ರಾಷ್ಟ್ರೀಯ ಮೀನುಗಾರಿಕಾ ನೀತಿಯನ್ನು ಜಾರಿಗೆ ತರಬೇಕು!

ತುಂಬ ದಿನಗಳ ಕಲ್ಪನೆ ಇಂದು ನನಸಾಗಿದೆ. ಜಿಲ್ಲೆಯಲ್ಲಿ 395 ಟವರ್ ಗಳು ಕೆಲಸ ಮಾಡುತ್ತಿದ್ದು, ಶೆ.65 ರಷ್ಟು ಜನರನ್ನು ಮಾತ್ರ ತಲುಪಲು ಸಾಧ್ಯವಾಗುತ್ತಿದೆ. 156 ಕಡೆ 3ಜಿ ಟವರ್ ಇದೆ. ಆದರೆ‌ ಶೆ.100 ರಷ್ಟು ತಲುಪಲು 2000 ಟವರ್ ಬೇಕು. ಇನ್ನೂ 10 ವರ್ಷ ಹೋದರೂ ಜಿ.ಎಸ್.ಎಮ್. ಟವರ್ ಮುಖಾಂತರ ಎಲ್ಲಾ ಜನರನ್ನು ತಲುಪಲು ಸಾಧ್ಯವಿಲ್ಲ.‌ ಆದರೆ ಗ್ರಾಮೀಣ‌ ಭಾಗವನ್ನು ಹೋಲಿಸಿದಲ್ಲಿ ರಾಜ್ಯದಲ್ಲಿ ನಮ್ಮ ಜಿಲ್ಲೆ ಮೊಟ್ಟ ಮೊದಲ ಸ್ಥಾನದಲ್ಲಿದ್ದು, ಅರ್ಬನ್ ಏರಿಯಾ ಸೇರಿಸಿದಲ್ಲಿ ನಮ್ಮ ಜಿಲ್ಲೆ ದುರ್ಗಮ ಪರಿಸ್ಥಿತಿಯಲ್ಲೂ ಮೂರನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಬಿ‌.ಎಸ್.ಎನ್.ಎಲ್. ಸೇವೆ ಉತ್ತಮವಾಗಿದೆ ಎಂದರು.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಇವರು ಸಿದ್ಧಪಡಿಸಿದ ಪಿ ಯು ವಿಜ್ಞಾನ ಕೈದೀವಿಗೆ ಪುಸ್ತಕ ಅನಾವರಣ‌.

ಸಾಲಮನ್ನಾದ ಹೊಡೆತ ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ರಾಜ್ಯ ಸರ್ಕಾರ ಸಾಲಮನ್ನಾ ಪ್ರಚಾರಕ್ಕೆ ಘೋಷಣೆ ಮಾಡಿ ಈಗ ರಸ್ತೆ ಮಾಡಲೂ ದುಡ್ಡಿಲ್ಲ ಎನ್ನುತ್ತಿದೆ. ನಮ್ಮದು ಸರ್ವ ಅಭಿವೃದ್ಧಿಯಾಗಿದೆ ಎಂದರು.

ಕೊರ್ಲಕಟ್ಟಾ ಗ್ರಾಮದಲ್ಲಿ ಸಚಿವ ಹೆಗಡೆಗೆ ಬಿ.ಎಸ್.ಎನ್.ಎಲ್.ಅಧಿಕಾರಿ ಎ.ಬಿ.ಗೌಡ, ಆರ್.ವಿ.ಹೆಗಡೆ ಚಿಪಗಿ, ಚಂದ್ರು ಎಸಳೆ ಸಾಥ್ ನೀಡಿದರೆ ಬಾಳೇಸರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಎಮ್.ಜಿ.ಹೆಗಡೆ ಗೆಜ್ಜೆ, ತಾಪಂ ಸದಸ್ಯ ಆರ್.ವಿ.ಹೆಗಡೆ, ಪ್ರಮುಖರಾದ ಎಮ್.ವಿ.ಭಟ್ ತಟ್ಟಿಕೈ, ಸಿ.ಎನ್.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.