ಕುಮಟಾ:ತಾಲೂಕಾ ಕ.ಸಾ.ಪ ಹಮ್ಮಿಕೊಂಡ ಶಿಕ್ಷಕಿ ಸಾವಿತ್ರಿ ಮಾಸ್ಕೇರಿಯವರ ಒಡಲ ಹಣತೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಗೋಕರ್ಣ ಹಾರುಮಾಸ್ಕೇರಿಯ ಹೊನ್ನದೀಪದಲ್ಲಿ ಯಶಸ್ವಿಯಾಗಿ ನಡೆಯಿತು.
ಕ.ಸಾ.ಪ.ಜಿಲ್ಲಾಧ್ಶಕ್ಷ ಅರವಿಂದ ಕರ್ಕಿಕೋಡಿ ಪುಸ್ತಕ ಬಿಡುಗಡೆಗೊಳಿಸಿದರು .ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ಪುಸ್ತಗಳು ಸಮಾಜಕ್ಕೆ ಹಾಗೂ ಜನತೆಗೆ ಮಾದರಿಯಾಗಲೆಂದು ಅಭಿಪ್ರಾಯಪಟ್ಟರು. ಮಾಸ್ಕೇರಿ ಎಂ.ಕೆ.ನಾಯಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸಾಹಿತಿ ರಾಮಕೃಪ್ಣ ಗುಂದಿ ಮುಖ್ಶ ಅತಿಥಿಯಾಗಿˌ ಎಚ್.ಎಸ್ˌಗುನಗˌ ರಾಜಮ ಹಿಚ್ಗಡˌ ಜಿ.ಪಂ ಸದಸ್ಶ ಪ್ರದೀಪ ನಾಯಕ ಅತಿಥಿಯಾಗಿ ಪಾಲ್ಗೊಂಡಿದ್ದರು.
ಡಿ.ಜಿ.ಪಂಡಿತ ಪುಸ್ತಕ ಪರಿಚಯ ಮಾಡಿದರು. ಕ.ಸಾ.ಪ ಅಧ್ಶಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ಅಧ್ಶಕ್ಷತೆ ವಹಿಸಿದ್ದರು. ಎಂ.ಎಂ.ನಾಯ್ಕ ಪ್ರಾಸ್ತಾವಿಕವಾಗಿ ಮಾತನ್ನಾಡಿದರು.
ˌ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸತೀಶ ನಾಯಕ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಕಾದಂಬರಿಗಾರ್ತಿ ಲಕ್ಷ್ಮೀ ನಾಯಕರನ್ನು ಸನ್ಮಾನಿಸಲಾಯಿತು. ಅಪಾರ ಸಂಖ್ಶೆಯಲ್ಲಿ ಸಾಹಿತ್ಶ ಪ್ರೇಮಿಗಳು ಹಾಜರಿದ್ದರು.