ಶಿರಸಿ :ಗುರುವಾರ ನಡೆದ ಉತ್ತರಕನ್ನಡ ಜಿಲ್ಲೆ ಶಿರಸಿಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತಮಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಾವು ರಾಜಕಾರಣ ಮಾಡೋಕೆ ಈ ಕುರ್ಚಿ ಮೇಲೆ ಕುಳಿತಿರೋದು. ಯಾವುದೇ ಸಮಾಜ ಸೇವೆ ಮಾಡಲಿಕ್ಕೆ ಅಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಅವರಿಗೆ ನೀವು ರಾಜಕಾರಣ ಮಾಡ್ತಿದ್ದಿರಾ ಅಂತ ಕೇಳಲಾಗಿ, ಅದಕ್ಕೆ ಉತ್ತರಿಸಿದ ಅನಂತ್ ಕುಮಾರ್ ಹೌದು, ನಾವು ರಾಜಕಾರಣ ಮಾಡುವುದಕ್ಕಾಗಿಯೇ ನಾವು ಬಂದಿರುವುದು. ಅದಕ್ಕಾಗಿಯೇ ಶಾಸಕ, ಸಂಸದ ಅಂತೆಲ್ಲಾ ಆಗಿರುವುದು. ಸಮಾಜ ಸೇವೆ ಮಾಡಲು ಬಂದಿಲ್ಲ ಎಂದರು.
ರಾಜಕಾರಣ ಬಿಟ್ಟು ಬೇರೇನೂ ಮಾಡಲಿಕ್ಕೆ ಬರೋದಿಲ್ಲ. ರಾಜಕಾರಣಾನೇ ಮಾಡೋದು. ಮಾಧ್ಯಮದವರು ಹೇಗೆ ಬರ್ಕೊಳ್ತಿರೋ ಬರ್ಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟದ್ದು ಅಂತ ಅನಂತ್ ಕುಮಾರ್ ಹೆಗ್ಡೆ ಹೇಳಿದರು.