ಹೊನ್ನಾವರ: ತಾಲೂಕಿನ ಮಂಕಿಮಡಿ ಗ್ರಾಮದ ಪುಟ್ಟ ಬಾಲಕಿ ಸಿಂಚನಾ ಇದೀಗ ದೊಡ್ಡ ಸಾಧನೆಗೆ ಮುನ್ನುಡಿ ಬರೆದಿದ್ದಾಳೆ .ಹಳ್ಳಿಗಾಡಿನಲ್ಲಿ ಬೆಳೆದು ಬಂದ ಈಕೆ ಈಗ ರಾಜ್ಯಮಟ್ಟಕ್ಕೆ ಹೋಗುವವರೆಗೆ ಬೆಳೆದು ನಿಂತಿದ್ದಾಳೆ.
ಜಿಲ್ಲಾ ಕ್ರೀಡಾಕೂಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಮೊದಲ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ ಗೌರವಕ್ಕೆ ಪಾತ್ರಳಾಗಿದ್ದಾಳೆ .ಕೂಲಿಕಾರ ಅಪ್ಪ ,ಗೃಹಿಣಿ ಅಮ್ಮ ತಮ್ಮ ಮಗಳ ಆಸೆಗೆ ತಮಗೆ ತಿಳಿದಂತೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಹೊನ್ನಾವರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿಯಲ್ಲಿ ಏಳನೇ ತರಗತಿ ಓದುತ್ತಿರುವ ಈಕೆಯ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆ ಹರಿದು ಬರುತ್ತಿದೆ.
.ಸೌಮ್ಯ ಸ್ವಭಾವದ ಈಕೆ ಓದಿನಲ್ಲೂ ಚುರುಕು ತನ್ನ ಸರಳ ನಡೆ ನುಡಿಯಿಂದಾಗಿ ಶಿಕ್ಷಕರಿಗೂ ಅಚ್ಚುಮೆಚ್ಚು .ಇವಳ ಭವಿಷ್ಯ ಉಜ್ವಲವಾಗಲಿ ಎಂದು ನಾವೆಲ್ಲ ಹಾರೈಸೋಣ.