ಕಾರವಾರ: ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾಧ್ಯಮದ ಎದುರು ಮಾತನಾಡಿದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅನಂತ್ ಕುಮಾರ್ ಹೆಗಡೆ ವಿರುದ್ಧ ಮತ್ತೆ ಹರಿ ಹಾಯ್ದಿದ್ದಾರೆ.

ಈ ಹಿಂದೆ ಅನಂತ ಕುಮಾರ ಹೆಗಡೆ ನಾಲಾಯಕ್, ಲೋಫರ್ ಎಂದು ಹೇಳಿಕೆ ನೀಡಿದ್ದೆ. ಅದನ್ನ ಮತ್ತೆ ಸಮರ್ಥಿಸಿಕೊಳ್ಳುತ್ತೇನೆ ಎಂದಿರುವ ಅವರು ಅನಂತ್ ಕುಮಾರ್ ಅವರೇ ರಾಜಕೀಯಕ್ಕೆ ಸೇವೆ ಮಾಡಲು ಬಂದಿಲ್ಲ ಎನ್ನುವುದನ್ನು ನಿನ್ನೆ ದಿನ ಹೇಳುವ ಮೂಲಕ ನನ್ನ ಹೇಳಿಕೆಯನ್ನು ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

  ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಿನ್ನೆ ಶಿರಸಿಯಲ್ಲಿ ಹೇಳಿಕೆ ನೀಡಿರುವಂತೆ, ತಾಕತ್ತಿದ್ದರೆ ಐದು ತಿಂಗಳಲ್ಲಿ ಅಂಕೋಲಾದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಿ ನೋಡೋಣ ಎಂದು ಸವಾಲೆಸೆದ ಆನಂದ್ ಅಸ್ನೋಟಿಕರ್ ರಾಜಕೀಯದ ಬುನಾದಿಯೇ ಸಮಾಜಸೇವೆ. ಅನಂತಕುಮಾರ ಸಮಾಜಸೇವೆ ಮಾಡೋಕೆ ಬಂದಿಲ್ಲ ಎನ್ನುತ್ತಾರೆ. ಜಗತ್ತಿಗೆ ಸುದ್ದಿ ಮುಟ್ಟಿಸುವ ಕೆಲಸ ಮಾಡುವ ಮಾಧ್ಯಮದವರಿಗೆ ಬಾಯಿಗೆ ಬಂದಂತೆ ಹೇಳುತ್ತಾರೆ.ಅನಂತಕುಮಾರ ಮಾಧ್ಯಮ ರಂಗಕ್ಕೆ ಅಪಚಾರ ಮಾಡ್ತಿದ್ದಾರೆ ಎಂದರು.

RELATED ARTICLES  ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಅನಂತಕುಮಾರ ಹೆಗಡೆ ರಾಜಕಾರಣ ಪರೇಶ್ ಸಾವಿನ ಮೇಲೆ ನಡೆಯುತ್ತಿದೆ. ಹಿಂದುಳಿದ ವರ್ಗದ ಯುವಕರ ಕೈಗೆ ಅನಂತಕುಮಾರ ಹೆಗಡೆ ಕತ್ತಿ ಕೊಟ್ಟಿದ್ದಾರೆ. ಜನತೆ ಅವರ ಮಾತಿಗೆ ಮರುಳಾಗುತ್ತಿದ್ದಾರೆ ಎಂದು ಅವರು ಹರಿ ಹಾಯ್ದರು.

RELATED ARTICLES  ಬೆಂಕಿ ನಂದಿಸುವಾಗ ವಿದ್ಯತ್ ತಂತಿ ತಗುಲಿ ಅರಣ್ಯ ರಕ್ಷಕ ಸಾವು.

ಹಿಂದುಳಿದ ಯುವಕರ ಮೇಲಿರುವ ಕೇಸ್ ಗಳ ಬಗ್ಗೆ ಅನಂತ್ ಕುಮಾರ್ ಈಗ ಮಾತಾಡ್ತಿಲ್ಲ. ಇನ್ನೂ ಪರೇಶ್ ಮೇಸ್ತಾ ಕೊಲೆಯ ತನಿಖೆ ಸಿಬಿಐನಿಂದ ಆಗಿಲ್ಲ. ಈಗ ಲೋಕಸಭಾ ಚುನಾವಣೆಗೂ ಇದನ್ನೇ ಬಳಸಿಕೊಳ್ಳುತ್ತಾರೆ. ಅವರಿಗೆ ಈ ಬಾರಿ ಅವಕಾಶ ಕೊಡಬಾರದು. ಈ ಬಾರಿಯಾದರೂ ಎಲ್ಲರೂ ಒಟ್ಟಾಗಿ ಅನಂತಕುಮಾರ ಹೆಗಡೆಗೆ ಬುದ್ಧಿ ಕಲಿಸಬೇಕು ಎಂದು ಅನಂತ್ ಕುಮಾರ್ ವಿರುದ್ಧವಾಗಿ ವಾಗ್ದಾಳಿ ನಡೆಸಿದರು.