ಕುಮಟಾ: ತಮ್ಮ ಶಾಸಕತ್ವದ ಅವಧಿಯಲ್ಲಿ ಗೋಕರ್ಣ ಭಾಗದ ಜನರಿಗೆ ನೀಡಿದ ಭರವಸೆಯಂತೆ ಅನುದಾನ ಮಂಜೂರು ಮಾಡಿಸಿ, ಈಗ ಸಡಗೇರಿಯ ಬೆಳಲೆ ಗುಡ್ಡದಲ್ಲಿ ಆರಂಭಗೊಂಡಿರುವ 24.5 ಕೋಟಿ ಅನುದಾನದ ಗೋಕರ್ಣ ಕುಡಿಯುವ ನೀರಿನ ಕಾಮಗಾರಿಯನ್ನು ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಪರಿಶೀಲನೆ ನಡೆಸಿದರು.
ಶಾಸಕತ್ವದ ಅವಧಿಯ ಬಹು ಅಭಿವೃದ್ಧಿ ಮಾಡಿದ್ದ ಶ್ರೀಮತಿ ಶಾರದಾ ಮೋಹನ ಶೆಟ್ಟಿಯವರು ಕೈಗೊಂಡ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಇದೂ ಕೂಡಾ ಒಂದಾಗಿದ್ದು ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ಈ ವರೆಗೂ ಆ ಯೋಜನೆಗಾಗಿ ಕಾರ್ಯ ಪ್ರವೃತ್ತರಾಗಿದ್ದು ಜನಮೆಚ್ಚುಗೆ ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸ
ಶ್ರೀ ವಿ. ಎಲ್. ನಾಯ್ಕ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸುರೇಖಾ ವಾರೀಕರ್, ಪಂಚಾಯತಿಯ ಅಧ್ಯಕ್ಷರುಗಳಾದ ಮಹಾಲಕ್ಷ್ಮಿ ಬಡ್ತಿ, ಸುಮಿತ್ರಾ ಗೌಡ, ಹನೀಫ್ ಸಾಬ್, ಜಯಂತ ನಾಯ್ಕ , ಹಮ್ಮಣ್ಣ ನಾಯ್ಕ ಮುಖಂಡರುಗಳಾದ ಸುರೇಶ್ ಪಟಗಾರ, ಸಂತೋಷ ನಾಯ್ಕ, ಆನಂದು ನಾಯಕ, ಜಗದೀಶ್ ಹರಿಕಂತ್ರ, ಪಾಪಣ್ಣ ನಾಯಕ, ನಾರಾಯಣ ನಾಯ್ಕ, ಶಾರದಾ ಮೂಡಂಗಿ, ಗಲಾಬಿ ಮೂಡಂಗಿ,ನಾಗರಾಜ್, ಸುರೇಶ್ ರೇಡಕರ್ ಮುಂತಾದವರು ಹಾಜರಿದ್ದರು.
ಈ ಯೋಜನೆಯಿಂದ ಗೋಕರ್ಣ, ಹನೇಹಳ್ಳಿ, ನಾಡಮಾಸ್ಕೇರಿ, ಬಂಕಿಕೊಡ್ಲು, ತೊರ್ಕೆ ಮತ್ತು ಮಾದನಗೇರಿ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಈ ಕುರಿತಾಗಿ ಜನತೆ ಮಾಜಿ ಶಾಸಕರಿಗೆ ಅಭಿನಂದನೆ ಸಮರ್ಪಿಸಿದ್ದಾರೆ.