ಕುಮಟಾ: ಇಲ್ಲಿನ ಪ್ರಸಿದ್ಧ ಕೆನರಾ ಕಾಲೇಜು ಸೊಸೈಟಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯುತ್ತಿದ್ದ ಪೌರತ್ವ ತರಬೇತಿ ಶಿಬಿರ ಯಶಸ್ವಿಯಾಗಿ ಸಂಪನ್ನವಾಯಿತು.
ಇಂದು ಬೆಳಿಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹೊನ್ನಾವರ ಎಸ್. ಡಿ. ಎಮ್. ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಮ್. ಆರ್.ನಾಯಕ ಅವರು “ಪ್ರಜಾಪ್ರಭುತ್ವದ ಮೌಲ್ಯಗಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ” ಈ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಜೀವನ ಮೌಲ್ಯಗಳು, ಪ್ರಜಾಪ್ರಭುತ್ವದಲ್ಲಿಯ ಮೌಲ್ಯಗಳು, ಪ್ರಸ್ತುತ ಮೌಲ್ಯಗಳ ಸ್ಥಿತಿ ಗತಿ, ಈ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವಲ್ಲಿ ಶಿಕ್ಷಕರ ಜವಾಬ್ದಾರಿ ಇನ್ನೂ ಮುಂತಾದ ವಿಷಯಗಳ ಬಗ್ಗೆ ತಮ್ಮ ನೇರ ದಿಟ್ಟ ನಿಲುವುಗಳು ,ಜ್ವಲಂತ ಉದಾಹರಣೆಗಳ ಮೂಲಕ ಎಳೆ ಎಳೆಯಾಗಿ ವಿಶ್ಲೇಷಿಸಿದರು.ಉಪನ್ಯಾಸ ಅದ್ಭುತವಾಗಿ ಮೂಡಿ ಬಂದಿತು.
ಪ್ರಾಚಾರ್ಯ ಡಾ.ಎಸ್.ಜಿ.ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಆಮಂತ್ರಿತರು ಶಿಬಿರದಲ್ಲಿ ಉಪಸ್ಥಿತರಿದ್ದರು.
ಇಂದು ಸಂಜೆ ನಡೆದ ಸಭಾ ಕಾರ್ಯಕ್ರಮದ ಮೂಲಕ ಶಿಬಿರ ಸಂಪನ್ನಗೊಂಡಿತು.