ಸಾಂದರ್ಭಿಕ ಚಿತ್ರ
ಭಟ್ಕಳ- ಸತತ ಏಳು ವರ್ಷಗಳಿಂದ ನವರಾತ್ರಿ ಸಮಯದಲ್ಲಿ ಶಾರದೋತ್ಸವವನ್ನು ಆಚರಿಸಿಕೊಂಡು ಬರುತಿರುವ ಮುರುಡೇಶ್ವರ ಬಸ್ತಿಮಕ್ಕಿಯ ಸಿರಿಗನ್ನಡ ಗೆಳೆಯರ ಬಳಗ ಈ ವರ್ಷ ಧರ್ಮಕಾರ್ಯದಲ್ಲಿ ಗ್ರಾಮೀಣ ಕ್ರೀಡೆಯನ್ನು ಉಳಿಸುವ ಯೋಚನೆಯೊಂದಿಗೆ ತಾಲೂಕು ಮಟ್ಟದ ಹಗ್ಗಜಗ್ಗಾಟ ಪಂದ್ಯಾವಳಿ ಆಯೋಜಿಸಿದೆ.
ಮೂರು ದಿನಗಳ ಶಾರದೋತ್ತವದಲ್ಲಿ ಅಕ್ಟೋಬರ್ ೧೮ ರಂದು ಸಂಜೆ ೬ ಗಂಟೆಗೆ ಪಂದ್ಯಾವಳಿ ಅಯೋಜನೆಗೊಳಿಸಿದ್ದು ಸಭಾ ಕಾರ್ಯಕ್ರಮವನ್ನು ಭಟ್ಕಳ ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಲಿದ್ದು ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೋವಿಂದ ನಾಯ್ಕ ಅಧ್ಯಕ್ಷತೆವಹಿಸಲಿದ್ದಾರೆ.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ನೀಲಗೋಡದ ಮಾದೇವ ಅಂಬಿಗ, ಮುರುಡೇಶ್ವರ ಉಪನಿರೀಕ್ಷಣಾಧಿಕಾರಿ ಬಸವರಾಜು, ರಾಜ್ಯ ಕಾಸ್ಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲೆಯ ಭಾವಕವಿ ಭಟ್ಕಳ ತಾಲೂಕು ೮ ನೇ ಸಮ್ಮೇಳನಾಧ್ಯಕ್ಷ ಉಮೇಶ ಮುಂಡಳ್ಳಿ, ಬೈಲೂರು ಪಂಚಾಯತ ಅಧ್ಯಕ್ಷ ಮಂಜುನಾಥ ನಾಯ್ಕ ಮೊದಲಾದ ಗಣ್ಯರು ಭಾಗವಹಿಸುವುದಾಗಿ ಮತ್ತು ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡ ಹೆಸರು ನೊಂದಾಯಿಸಿಕೊಳ್ಳಬೇಕಾಗಿ ಸಿರಿಗನ್ನಡ ಗೆಳೆಯರ ಬಳಗದ ಗೌರವಾಧ್ಯಕ್ಷ ವಾಸು ನಾಯ್ಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.