ಕುಮಟಾ: ಗೋಕರ್ಣದ ತದಡಿಯ ಡಾಕಾ ಬಳಿ ಶವವೊಂದು ಪತ್ತೆಯಾಗಿ ಕೆಲ ಕಾಲ ಭಯದ ಸ್ಥಿತಿ ನಿರ್ಮಾಣವಾಗಿತ್ತು .ನಂತರ ಸ್ಥಳಕ್ಕಾಗಮಿಸಿದ ಗೋಕರ್ಣ ಪೊಲೀಸರು ಈ ಬಗ್ಗೆ ಸ್ಥಳೀಯರಿಂದ ಮಾಹಿತಿಯನ್ನು ಪಡೆದರು .
ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಶಿವಾ ನಾಯ್ಕ ನಾಣಿಕಟ್ಟಾ ಎನ್ನುವವರ ಮೃತದೇಹ ಇದು ಎಂದು ಪತ್ತೆ ಹಚ್ಚಲಾಗಿದೆ .
ಶವ ನದಿಯಲ್ಲಿ ತೆರಳುತ್ತಿದ್ದ ಸ್ಥಿತಿಯಲ್ಲಿ ಇತ್ತು ಎಂದು ವರದಿಯಾಗಿದೆ .ಪೊಲೀಸರು ಸ್ಥಳೀಯರಿಂದ ಮಾಹಿತಿಯನ್ನು ಪಡೆದು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ .
ಕೆಲವರು ಕೊಲೆ ಇರಬಹುದು ಎಂದು ಶಂಕಿಸಿದರೆ ಇನ್ನು ಕೆಲವರು ಆತ್ಮಹತ್ಯೆ ಇರಬಹುದು ಎಂದು ಊಹಾಪೋಹ ವಾಗಿ ಹೇಳುತ್ತಿದ್ದಾರೆ. ಆಕಸ್ಮಿಕವಾಗಿ ಸತ್ತಿರ ಬಹುದೆಂದೂ ಊಹೆಯ ಮಾತುಗಳು ಕೇಳುತ್ತಿದ್ದವು. ಆದರೆ ಈವರೆಗೂ ನಿಖರ ಮಾಹಿತಿ ಬಂದಿಲ್ಲ .
ಸ್ಥಳದಲ್ಲಿ ಪೊಲೀಸರು ಹಾಜರಿದ್ದು ಮುಂದಿನ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ ಪೊಲೀಸ್ ತನಿಖೆಯ ನಂತರದಲ್ಲಿ ಸಂಪೂರ್ಣ ಮಾಹಿತಿ ಬರಬೇಕಾಗಿದೆ .