ಭಟ್ಕಳ: ಇಲ್ಲಿನ ಮುರ್ಡೇಶ್ವರದ ಕಾಯ್ಕಿಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಹಿಳೆ ಮಾದೇವಿ ಬಡಿಯಾ ಗೊಂಡ(45) ಇವರಿಗೆ ಶಿರಾಣಿ ಬಳಿ ಶುಕ್ರವಾರದಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ.
ಮೃತ ಮಹಿಳೆ ಮಾದೇವಿ ಬಡಿಯಾ ಗೊಂಡ(45) ಎಂದು ತಿಳಿದು ಬಂದಿದೆ. ಶುಕ್ರವಾರದಂದು ಸಂಜೆ ಮನೆಯ ಹಿಂಬದಿಯಲ್ಲಿನ ಅವರದ್ದೇ ಜಮೀನಿನಲ್ಲಿ ಭತ್ತದ ಗದ್ದೆಯ ಜಮೀನಿಗೆ ನೀರು ಕಟ್ಟಲು ಹೋದ ವೇಳೆ ಹಾವು ಕಚ್ಚಿದ್ದು, ತಕ್ಷಣಕ್ಕೆ ಇಲ್ಲಿನ ತಾಲೂಕಾಸ್ಪತ್ರೆ ಕರೆ ತಂದಿದ್ದಾರೆ. ಆದರೆ ಹಾವಿನ ವಿಷವೂ ದೇಹವನ್ನೇರಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಮೃತಳ ಕುಟುಂಬದವರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತಳು ಇಬ್ಬರು ಮಕ್ಕಳನ್ನು ಅಗಲಿದ್ದು, ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.