ಅಂಕೋಲಾ:ತಾಲೂಕಿನ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾಂತಿಕಾ ಸಭಾಭವನದ ಉದ್ಘಾಟನೆ ಹಾಗೂ ಕೇಂದ್ರ ಸಚಿವಾಲಯದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಕಿಟ್ ವಿತರಿಸಿದ ಮಾನ್ಯ ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ ಹೆಗಡೆ ಮಾತನಾಡಿ ಸಮ್ಮಿಶ್ರ ಸರಕಾರ ತನ್ನ ಲೋಪಗಳನ್ನು ಅಡಗಿಸಲು ಕೇಂದ್ರ ಸರಕಾರ್ ಮೇಲೆ ಗೂಬೆ ಕೂರಿಸುವ ಕೆಲಸಮಾಡುತ್ತಿದೆ.

ಕೇಂದ್ರ ಸರಕಾರದಿಂದ ಜಾರಿಯಾದ ಯೋಜನೆಗೆ ತಮ್ಮ ಹೆಸರನ್ನಿಟ್ಟು ತಾವೇ ಹಣವ್ಯವಯಿಸುತ್ತಿರುವ ಹಾಗೆ ಬಿಂಬಿಸುತ್ತಿದೆ ಎಂದರು. ಇದಕ್ಕೆ ಉದಾಹರಣೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಅನ್ನಭಾಗ್ಯ ಯೋಜನೆ ನಾಡಿನ ಎಲ್ಲರಿಗೂ ಈ ಯೋಜನೆಯ ತಿರುಳು ತಿಳಿದಿತ್ತು. ಕೇವಲ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುತ್ತಿದ್ದೇವೆಂದು ಹೇಳುತ್ತಿದ್ದ ಸಿದ್ದರಾಮಯ್ಯ ಅದೇ ಕೇಂದ್ರ ಸರಕಾರ 27 ರೂ. ನೀಡಿ ಖರೀದಿಸಿ ನಮಗೆ ನೀಡುತ್ತಿದೆ ಎಂದು ಹೇಳಿರಲಿಲ್ಲ. ಆದರೆ ಪ್ರತಿಯೊಂದು ಭಾಗ್ಯದ ಮೇಲೂ ತಮ್ಮ ಭಾವಚಿತ್ರ ಅಂಟಿಸಿಕೊಂಡು ಮೆರೆದರು. ಯಾರೋ ಮಾಡಿದ ಕೆಲಸ ತಾವೇ ಮಾಡಿದ್ದೆಂದು ಬಿಂಬಿಸುವಲ್ಲಿ ಕಾಂಗ್ರೆಸ್ ಎತ್ತಿದ ಕೈ ಎಂದರು.

RELATED ARTICLES  ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು.

ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ ಮಾತನಾಡಿ ಕೆಲವು ಮಾದ್ಯಮಗಳಲ್ಲಿ ನಮ್ಮ ಕೇಂದ್ರ ಸಚಿವರು ಯಾವುದೇ ಅಭಿವೃದ್ದಿಯ ಕಾರ್ಯ ಮಾಡಿಲ್ಲ ಎಂದು ಬರೆಯುತ್ತಿರುವುದನ್ನು ನೋಡಿ ಮನಸಿಗೆ ಬೇಸರ ಉಂಟಾಗಿದೆ. ಮಾನ್ಯ ಸಚಿವರು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಪರ ಕಾರ್ಯಮಾಡಿದ್ದರೂ ಬೇರೆಯವರು ಮಾಡಿದ ಕೆಲಸವನ್ನು ತಾವು ಉದ್ಘಾಟಿಸಿ ಹೆಸರು ಮಾಡಿಕೊಳ್ಳುವ ಕೆಲಸ ಮಾಡಿಲ್ಲ. ಇದಕ್ಕೆ ಉದಾಹರಣೆಯಾಗಿ ಮಾನ್ಯ ಕೇಂದ್ರ ಸಚಿವರ ಪರಿಶ್ರಮದಿಂದ ನಿರ್ಮಾಣಗೊಂಡಿದ್ದ ಐದು ಕೋಟಿ ವೆಚ್ಚದ ಬ್ರಿಡ್ಜ್ ನ ಉದ್ಘಾಟನೆಯನ್ನು ಸಿದ್ದರಾಮಯ್ಯರು ನೆರವೇರಿಸಿ ತಾವೇ ನಿರ್ಮಿಸಿರುವಂತೆ ಬಿಂಬಿಸಿದರು. ಕೇಂದ್ರ ಸರಕಾರದ ಹಲವಾರು ಜನಪರ ಯೋಜನೆಗಳನ್ನು ರಾಜ್ಯ ಸರಕಾರ‌ ಜನರಿಂದ ಮರೆಮಾಚುವ ಯತ್ನದಲ್ಲಿ‌ ತೊಡಗಿದೆ. ಆದರು ಕೇಂದ್ರ ಸಚಿವರು ಮಾನ್ಯ ನರೇಂದ್ರ ಮೋದಿಯವರ ಕನಸಿನ ಯೋಜನೆಗಳಾದ ಉಜ್ವಲಾ ಯೋಜನೆ, ಬೇಟಿ ಬಚಾವೊ ಬೇಟಿ ಪಡಾವೋ, ಮುದ್ರಾ ಯೋಜನೆಗಳ ಉಪಯೋಗಗಳನ್ನು ಈಗಾಗಲೇ ಜನ ಪಡೆದುಕೊಂಡಿದ್ದಾರೆ. ಮುದ್ರಾ ಯೋಜನೆಯಿಂದ ವಿದ್ಯಾವಂತ ನಿರುದ್ಯೋಗಿಗಳು ಸ್ವಾವಲಂಬಿಯಾದರು. ಉಜ್ವಲಾ ಯೋಜನೆಯು ಗೃಹಿಣಿಯರ ಆರೋಗ್ಯ ಮಟ್ಟ ಸುಧಾರಿಸುವಲ್ಲಿ ಯಶಸ್ವಿಯಾಗುತ್ತಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯೂ ಕೂಡ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಕೇಂದ್ರ ಕೈಗೊಂಡ ಕ್ರಮಗಳಿಗೆ ಕೈಗನ್ನಡಿಯಾಗಿದೆ ಎಂದರು.

RELATED ARTICLES  ಕುಮಟಾ ರೈಲ್ವೆ ನಿಲ್ದಾಣದಲ್ಲಿ ಮಳೆ ನೀರು ಸೋರಿಕೆ ವಿಡಿಯೋ : ಶಾಸಕರಿಂದ ಭೇಟಿ

ಸಮ್ಮಿಶ್ರ ಸರಕಾರವು ಸಂಪೂರ್ಣ ವಿಫಲತೆಯ ಹಾದಿ ಹಿಡಿದಿದೆ. ಸರಕಾರ ರಚನೆಯಾಗಿ ಇಷ್ಡು ದಿನಗಳಾದರೂ ಒಂದೇ ಒಂದು ರೂ. ಅನುದಾನ ಬಿಡುಗಡೆ ಮಾಡಿಲ್ಲ ಆದರೆ ಇದಕ್ಕೆಲ್ಲ ಕಾರಣ ಕೇಂದ್ರ ಸರಕಾರ ಎಂಬ ಕುಂಟು ನೆಪ ಹೇಳುತ್ತಿದೆ ಎಂದರು. ದಿನದ ೨೪ ಘಂಟೆಗಳಲ್ಲಿ ಕೇವಲ ನಾಲ್ಕರಿಂದ ಐದು ಘಂಟೆಗಳಷ್ಟೇ ವಿಶ್ರಾಂತಿ ತೆಗೆದುಕೊಂಡು ದೇಶದ ಅಭಿವೃದ್ಧಿ ಗೆ ಅವಿರತ ಪ್ರಯತ್ನಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಮತ್ತೊಮ್ಮೆ ನಮ್ಮ ಹೆಮ್ಮೆಯ ಮೋದಿಜಿರವರನ್ನು ಆಯ್ಕೆಮಾಡಿ ಅವರೊಂದಿಗೆ ದೇಶದ ಅಭಿವೃದ್ಧಿ ಗೆ ನಮ್ಮ ಕೈಲಾದ ಕೆಲಸಗಳನ್ನು ಮಾಡೋಣ ಎಂದರು.