ಹೊನ್ನಾವರ: ಗೇರುಸೊಪ್ಪ ಜಲಾಶಯದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ವಾಹನ ಚಾಲಕನ ಶವ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದೆ.
ಗುತ್ತಿಗೆ ವಾಹನ ಚಾಲಕನಾಗಿದ್ದ ರವಿ ತಿಮ್ಮಪ್ಪ ನಾಯ್ಕ ತಾಲೂಕಿನ ಶರಾವತಿ ಟೇಲರೇಸ್ ಆಣಿಕಟ್ಟೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಶವಕ್ಕಾಗಿ ಸತತ ಮೂರು ದಿನಗಳವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಹೀಗಾಗಿ ಮಂಗಳೂರಿನ ಪರಿಣಿತ ಮುಳುಗು ತಜ್ಞರು, ಕಾರವಾರದ ನೌಕಾನೆಲೆ ಸಿಬ್ಬಂದಿ ಆಗಮಿಸಿ ಹುಡುಕಾಟ ನಡೆಸಿದ್ದರು. ತದನಂತರ ಡ್ಯಾಂ ಬಳಿ ಶವ ಪತ್ತೆಯಾಗಿದೆ ಎನ್ನಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಫೋನ್‌ನಲ್ಲಿ ಮಾತಾಡುತ್ತಿರುವ ವ್ಯಕ್ತಿ ಏಕಾಏಕಿ ಜಲಾಶಯಕ್ಕೆ ಹಾರಿದ್ದ ಎನ್ನಲಾಗಿ, ಆತನ ಆತ್ಮಹತ್ಯೆಯ ದೃಷ್ಯಾವಳಿಗಳು ಸಿ.ಸಿ ಟಿ ವಿಯಲ್ಲಿ ರೆಕಾರ್ಡ ಆಗಿದ್ದು ಪೋಲೀಸ್ ತನಿಖೆ ನಡೆದಿದೆ.