ಭಟ್ಕಳ: ವಿವಾಹಿತೆಯೋರ್ವಳು ತನ್ನ ತಾಯಿಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ 10 ಘಂಟೆಯ ಸುಮಾರಿಗೆ ಬೆಳಕಿಗೆ ಬಂದಿದೆ.

ವೀಣಾ ಶಿವರಾಮ ನಾಯ್ಕ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಇದೆ ವರ್ಷದ ಫೆಬ್ರವರಿಯಲ್ಲಿ ಆಕೆಯ ಮದುವೆಯಾಗಿತ್ತು. ಆಕೆ ಗಂಡನೊಂದಿಗೆ ಸಂತಸದಿಂದ ಇದ್ದಿರಲಿಲ್ಲ ಎಂಬುದಾಗಿ ಆಕೆಯ ತಾಯಿ ಮನೆಯವರು ತಿಳಿಸಿದ್ದು, ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಳೆದ 15 ದಿನದಿಂದ ತವರು ಮನೆಯಲ್ಲಿ ವಾಸವಿದ್ದಿದ್ದಳು. ಸ್ಥಳಕ್ಕೆ ತಹಶೀಲ್ದಾರ ವಿ. ಎನ್ ಬಾಡ್ಕರ ಬೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES  ಕುಮಟಾದ ಬೆಟ್ಕುಳಿಯಲ್ಲಿ ಬೈಕ್ ಹಾಗೂ ಸ್ವಿಪ್ಟ್ ಕಾರ್ ನಡುವೆ ಅಪಘಾತ

ಅಗ್ನಿಶಾಮಕ ದಳದವರು ಮೃತ ದೇಹವನ್ನು ಬಾವಿಯಿಂದ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ