ಕುಮಟಾ: ಸಿದ್ದಾಪುರ ಮೂಲದ ವ್ಯಕ್ತಿಯು ಗೋಕರ್ಣದ ಮೂಡಗಿಯ ಯುವತಿಯನ್ನು ಮದುವೆಯಾಗಿ ಮನೆ ಅಳಿಯನಾಗಿ ಗೋಕರ್ಣದಲ್ಲಿಯೇ ನೆಲಸಿ ಆಚಾರಿ (ಮರಕೆಲಸ)ಕೆಲಸ ಮಾಟುತಿದ್ದ ಶಿವ ನಾಯ್ಕ ಎನ್ನುವವನು ಗೋಕರ್ಣದಲ್ಲಿ ಹೆಣವಾಗಿ ಪತ್ತೆಯಾಗಿ ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣನಾಗಿದ್ದ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿಯ ಸಮುದ್ರ ತೀರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಿಕ್ಕಿರುವ ಶಿವ ನಾಯ್ಕ ಎನ್ನುವವನ ಮೃತದೇಹವು ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಕೊಲೆ ಮಾಡಿರುವುದನ್ನು ದೃಡಪಡಿಸಿದ್ದಾರೆ.
ಎರಡು ದಿನದ ಹಿಂದೆ ನಾಪತ್ತೆಯಾಗಿ ತದಡಿ ಸಮುದ್ರದ ಬಳಿ ಶವವಾಗಿ ಈತ ಪತ್ತೆಯಾಗಿದ್ದ. ಘಟನೆ ಸಂಬಂಧ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕವಾಗಿ ಆತನ ದೇಹದಲ್ಲಾಗಿದ್ದ ಗಾಯ ಗುರುತಿಸಿ ಹತ್ಯೆ ಮಾಡಿರುವ ಸಂಶಯ ವ್ಯಕ್ತಪಡಿಸಿದ್ದರು.
ಈ ಕಾರಣದಿಂದ ಮೃತ ದೇಹವನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಶವ ಪರೀಕ್ಷೆ ನಡೆಸಿದ ನಂತರ ಹತ್ಯೆ ಯಾಗಿದೆ ಎಂದು ದೃಡಪಟ್ಟಿದೆ.
ಕೊಲೆ ಮಾಡಿದ ಅಪರಾಧಿ ಹುಡುಕಾಟದಲ್ಲಿ ಗೋಕರ್ಣ ಪೊಲೀಸರು ಬಲೆ ಬೀಸಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆಯಂತೆ ವಿಶೇಷ ತಂಡ ರಚಿಸಲಾಗಿದೆ.
ಮನೆ ಅಳಿಯನಾಗಿ ಬದುಕುತ್ತಿದ್ದ ಈತನ ಕೊಲೆಗೆ ಕಾರಣವೇನಿರಬಹುದು? ಈ ಕೊಲೆಯ ಹಿಂದೆ ಇರುವವರಾರು ಎಂಬ ಬಗ್ಗೆ ಪೋಲೀಸ್ ತನಿಖೆ ನಂತರದಲ್ಲಿ ಪೂರ್ಣ ಮಾಹಿತಿ ಲಭ್ಯವಾಗಲಿದೆ.