ಕಾರವಾರ: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿರುವ ಗೊಂದಲ ಇದೀಗ ಶಿಕ್ಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಗೊಂದಲ ನಿವಾರಣೆಗೆ ಮನವಿ ಮಾಡಿತ್ತಿರುವುದು ಸಾಮಾನ್ಯಬೆಂಬಂತಾಗಿದೆ.
ಇಂದು ಸಹ ಈ ಗೊಂದಲ ನಿವಾರಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಶಿಕ್ಷಕರು ಮನವಿ ಸಲ್ಲಿಸಿದರು.
ನಗರದ ಗುರುಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಶಿಕ್ಷಣ ಇಲಾಖೆ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಸಂಬಂಧ ಕೌನ್ಸ್ಲಿಂಗ್ಗೆ ಸಮಯ ನಿಗದಿ ಪಡಿಸಿತ್ತು. ಅದರಂತೆ ಜಿಲ್ಲೆಯ ನೂರಾರು ಶಿಕ್ಷಕರು ಬಂದು ಹಾಜರಾಗಿದ್ದರು. ತಾಂತ್ರಿಕ ತೊಂದರೆಯಿಂದ ಸಂಜೆ 4 ಗಂಟೆ ಆದರೂ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಲಿಲ್ಲ.
ವರ್ಗಾವಣೆ ಪ್ರಕ್ರಿಯೆಯಲ್ಲಿ ಕೆಲ ಗೊಂದಲಗಳಿವೆ. ವರ್ಗಾವಣೆಯನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮಾಡುತ್ತಿದ್ದರಿಂದ ತೊಂದರೆಯಾಗುತ್ತದೆ. ಮುಂದಿನ ಏಪ್ರಿಲ್ – ಮೇ ತಿಂಗಳಲ್ಲಿ ವರ್ಗಾವಣೆಗೆ ಚಾಲನೆ ನೀಡಬೇಕು ಎಂದು ಅನಂತ ಕುಮಾರ ಹೆಗಡೆಗೆ ಮನವಿ ಸಲ್ಲಿಸಿದರು.
ಶಿಕ್ಷಕರು ಈಪ್ರಕ್ರಿಯೆಯಿಂದ ಬೇಸಿತ್ತಿದ್ದು ಹಿಡಿ ಶಾಪ ಹಾಕುತ್ತಿದ್ದಾರೆ.