ಅಂಕೋಲಾ : ಇಲ್ಲಿಯ ಕೆಎಲ್‍ಇ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮೂಲತ ಮುರ್ಡೇಶ್ವರ ಮಾವಳ್ಳಿಯ ರಾಘವೇಂದ್ರ ಶನಿಯಾರ ನಾಯ್ಕ (25) ಎಂಬಾತನೆ ಮೃತ ಯುವಕನಾಗಿದ್ದಾನೆ. ಕಳೆದೆರಡು ತಿಂಗಳ ಹಿಂದೆ ಪಟ್ಟಣದ ಕೆ.ಎಲ್.ಇ. ರಸ್ತೆಯ ಎದುರಿನ ಕಟ್ಟಡದಲ್ಲಿ ಹೊಟೇಲನ್ನು ಇತನು ನಡೆಸಿಕೊಂಡಿದ್ದನು. ಹೊಟೇಲ್ ಉದ್ಯಮದಲ್ಲಿ ಉಂಟಾದ ನಷ್ಟದಿಂದಾಗಿ ಇತನು ಹತಾಸನಾಗಿದ್ದನು. ಹೀಗಾಗಿ ಪತ್ರವನ್ನು ಬರೆದಿಟ್ಟಿದ್ದು ರವಿವಾರ ರಾತ್ರಿ ಸಾವನ್ನಪ್ಪಿರಬಹುದು ಎಂದು ತಿಳಿದು ಬಂದಿದೆ. ಸಾವಿನ ಪ್ರಕರಣ ಪೊಲೀಸ ತನಿಖೆಯಿಂದಲೆ ಹೊರಬೀಳಬೇಕಿದೆ.
ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್.ಐ. ವೀಣಾ ಹೊನ್ನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES  ವಿವೇಕನಗರ ವಿಕಾಸ ಸಂಘ"ದ ಕಾರ್ಯಕಾರೀ ಸಮೀತಿ ಸದಸ್ಯರ ಆಯ್ಕೆ.