ಕುಮಟಾ : ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‍ನಲ್ಲಿ ರಜಾ ದಿನಗಳಲ್ಲಿ 10 ನೇ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಒಂದು ವಾರಗಳವರೆಗೆ ನಡೆಯಿತು. ಪ್ರಥಮ ದಿನದ ರಜಾ ಕ್ಲಾಸ್‍ನ್ನು ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳಾದ ಪ್ರಗತಿ ವಿದ್ಯಾಲಯ ಮೂರೂರು ಕನ್ನಡ ಶಿಕ್ಷಕರಾದ ರಾಘವೇಂದ್ರ ಭಟ್ಟರವರು ಕನ್ನಡ ವ್ಯಾಕರಣದ ಬಗ್ಗೆ ಸುಧೀರ್ಘವಾದ ಉಪನ್ಯಾಸ ನೀಡಿದರು “ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಎಲ್ಲಾ ಭಾಷಾ ವಿಷಯಗಳ ವ್ಯಾಕರಣಾಂಶಗಳ ಬಗ್ಗೆ ಹೆಚ್ಚೆಚ್ಚು ಅರಿತು ಕೊಂಡಷ್ಟು ಭಾಷೆಯಲ್ಲಿ ಪ್ರೌಢಿಮೆ ಪಡೆಯಲು ಸಾಧ್ಯ ಕಲಿಕೆ ನಿರಂತರವಾಗಿರಬೇಕು” ಎಂದರು.
ಹೈಸ್ಕೂಲ್ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ರವರು “ಸಂಪನ್ಮೂಲ ವ್ಯಕ್ತಿಗಳಿಂದ ಪಡೆದ ಜ್ಞಾನವನ್ನು ನಿಜವಾದ ಗುರಿ ಸಾಧನೆಗೆ ವಿನಿಯೋಗಿಸಿ ಅವಿರತ ಪ್ರಯತ್ನದಿಂದ ಯಶಸ್ಸು ಸಾಧ್ಯ” ಎಂದರು ಉಪನ್ಯಾಸಕರಾಗಿ ಆಗಮಿಸಿ ಪಿ.ಎಮ್.ಹೈಸ್ಕೂಲ್ ನಿವೃತ್ತ ಶಿಕ್ಷಕರಾದ ಎಸ್.ವಿ.ಮುಳಗುಂದ ರವರು ಹಿಂದಿ ವಿಷಯದಲ್ಲಿನ ವ್ಯಾಕರಣಾಂಶಗಳ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕ ಎನ್ ರಾಮು ಹಿರೇಗುತ್ತಿ, ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ್, ಮಹಾದೇವ ಗೌಡ, ಜಾನಕಿ ಗೊಂಡ, ಇಂದಿರಾ ನಾಯಕ, ವಿಷಯ ಶಿಕ್ಷಕರು ಕನ್ನಡ, ಇಂಗ್ಲೀಷ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಂಸ್ಕøತ, ಹಿಂದಿ ವಿಷಯವನ್ನು ವಿದ್ಯಾರ್ಥಿಗಳಿಗೆ ಭೋದಿಸಿದರು. ಹೈಸ್ಕೂಲ್ ಎಲ್ಲಾ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಶಾಲಾ ಶಿಕ್ಷಕರಿಂದ ವಿಶೇಷ ಉಪನ್ಯಾಸದ ರಜಾದಿನಗಳ ವಿಶೇಷ ತರಗತಿಯ ಪ್ರಯೋಜನ ಪಡೆದುಕೊಂಡರು.
ವರದಿ: ಎನ್ ರಾಮು ಹಿರೇಗುತ್ತಿ