ಅಂಕೋಲಾ: ನಿನ್ನೆ ರಾತ್ರಿ ತಾಲೂಕಿನ ಡೋಂಗ್ರಿ ಬಳಿ ದನಗಳನ್ನು ಕದ್ದೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಪೋಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಜಂಟಿ ಯಾಗಿ ಕಾರ್ಯಾಚರಣೆ ನಡೆಸಿ ದನಗಳ್ಳರನ್ನು ಬಂಧಿಸಿದ್ದಾರೆ.

RELATED ARTICLES  ಮತ್ಯಗಂಧಾ ರೈಲಿನಲ್ಲಿ ಅನಧೀಕೃತವಾಗಿ ಗೋವಾ ಮದ್ಯ ಸಾಗಾಟ ; ಪೋಲೀಸರ ವಶವಾಯ್ತು 21 ಲಕ್ಷ ಮೌಲ್ಯದ ಮದ್ಯ

ಹೊಸಕಂಬಿ ಮಾರ್ಗವಾಗಿ 1 ಕೋಣ ಹಾಗೂ 10 ದನಕರುಗಳನ್ನು ಇವರು ಕದ್ದು ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ರಾಘವೇಂದ್ರ ನಾಯ್ಕ ಹಾಗೂ ಸಂದೀಪ ನಾಯ್ಕ ಬಂಧಿತ ಆರೋಪಿಗಳು.

RELATED ARTICLES  ಹಳದೀಪುರದಲ್ಲಿ ವಿಜ್ರಂಭಣೆಯಿಂದ ನಡೆಯಿತು ಯುಗಾದಿ ಉತ್ಸವ ಕಾರ್ಯಕ್ರಮ.

ಸ್ಥಳಕ್ಕೆ ಪಿಎಸ್ಐ ಶ್ರೀಧರ್ ಮತ್ತು ಅವರ ತಂಡ ಭೇಟಿ ನೀಡಿ ಉಳಿದ ದನಗಳನ್ನು ಸಂರಕ್ಷಣೆ ಮಾಡಿದ್ದಾರೆ. ಆದರೆ, ಅದರಲ್ಲಿ ಒಂದು ದನ ಮೃತಪಟ್ಟಿದೆ ಎಂದು ವರದಿಯಾಗಿದೆ.

ಮತ್ತೆ ಈ ಭಾಗದಲ್ಲಿ ದನಗಳ್ಳರ ಸುದ್ದಿ ಭಾರೀ ಸದ್ದು ಮಾಡುತ್ತಿದೆ.