ಕುಮಟಾ : ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕುಂಭೇಶ್ವರ ದೇವಾಲಯದ ಅರ್ಚಕರು ಹಾಗೂ ಯೋಗಪಟುಗಳು ಹಾಗೂ ಯೋಗ ಕಾರ್ಯಾಗಾರಗಳನ್ನು ನಡೆಸುತ್ತಿದ್ದ ವಿಶ್ವೇಶ್ವರ ಭಟ್ ನಾಪತ್ತೆಯಾಗಿದ್ದು ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ವಿಶ್ವೇಶ್ವರ ಭಟ್ ಅವರು ನಿನ್ನೆಯಿಂದ ಕಣ್ಮರೆಯಾಗಿದ್ದು ಇದೀಗ ಅವರ ಸಂಬಂಧಿ ಹಾಗೂ ಸ್ನೇಹಿತರು ಯಾರಿಗಾದರೂ ಸುಳಿವು ಸಿಕ್ಕಲ್ಲಿ ತಮ್ಮನ್ನು ಸಂಪರ್ಕಿಸಲು ಈ ಮೂಲಕ ವಿನಂತಿಸಿದ್ದಾರೆ.

RELATED ARTICLES  ಹೊನ್ನಾವರದ ಬಾಳೆಗದ್ದೆಯಲ್ಲಿ ಉದ್ಘಾಟನೆಗೊಂಡ ಕಲರ್ ಫುಲ್ ಕ್ರಿಯೇಷನ್.

ನಿನ್ನೆ ಕುಮಟಾ ಮೂರೂರಿನಲ್ಲಿ ಯಾರದೋ ಹೊಸ ಜಮೀನಿನ ಸ್ಥಳ ಶುದ್ಧಿ ಕಾರ್ಯಕ್ಕಾಗಿ ಅಪರಿಚಿತರೊಂದಿಗೆ ತೆರಳಿದ್ದರು ಎನ್ನಲಾಗಿದ್ದು ,ಅಪರಿಚಿತರ ವಾಹನದಲ್ಲಿಯೇ ಇವರು ತೆರಳಿದ್ದರು ಎನ್ನಲಾಗಿದೆ . ಈ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

RELATED ARTICLES  ಮೇದಿನಿಯ ಶಾಲೆಯ ಶಿಕ್ಷಕ ಗಜಾನನ ಪಟಗಾರ ಮಾಸೂರು ಇವರಿಗೆ ವಿನಯಸ್ಮೃತಿ ಸಮರ್ಥ ಶಿಕ್ಷಕ ಪುರಸ್ಕಾರ.

ವಿಶ್ವೇಶ್ವರ ಭಟ್ಟರವರ ಸುಳಿವು ಸಿಕ್ಕಲ್ಲಿ ಈ ನಂಬರ್ ಸಂಪರ್ಕಿಸಿ
ಕುಮಟಾ ಠಾಣೆ: 08386-222333
ರವಿ ತೆಪ್ಪ- 9945331503
ವಿ ಟಿ ಭಟ್ಟ- 9481462974
ರಾಮು ಅಡಿ- 9986807092