ಕುಮಟಾ: ಸಿದ್ದಾಪುರ ಮೂಲದ ವ್ಯಕ್ತಿಯು ಗೋಕರ್ಣದ ಮೂಡಗಿಯ ಯುವತಿಯನ್ನು ಮದುವೆಯಾಗಿ ಮನೆ ಅಳಿಯನಾಗಿ ಗೋಕರ್ಣದಲ್ಲಿಯೇ ನೆಲಸಿ ಆಚಾರಿ (ಮರಕೆಲಸ)ಕೆಲಸ ಮಾಟುತಿದ್ದ ಶಿವ ನಾಯ್ಕ ಎನ್ನುವವನು ಗೋಕರ್ಣದಲ್ಲಿ ಹೆಣವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಮಾಡಿದ ವ್ಯಕ್ತಿಯನ್ನು ಹಿಡಿಯುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿಯ ಸಮುದ್ರ ತೀರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಿಕ್ಕಿರುವ ಶಿವ ನಾಯ್ಕ ಎನ್ನುವವನ ಮೃತದೇಹವು ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಕೊಲೆ ಎಂಬುದನ್ನು ಹೇಳಿದ್ದರು. ಇದೀಗ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದತ್ತಾತ್ರೇಯ ವೆಂಕಟ್ರಮಣ ನಾಯ್ಕ ಸಾಣಿಕಟ್ಟಾ ಎಂಬುವವನೇ ಕೊಲೆ ಮಾಡಿದ ವ್ಯಕ್ತಿ.
ಸಾಲ ನೀಡಿರೋದನ್ನ ವಾಪಸ್ ನೀಡಿಲ್ಲ ಅನ್ನೊ ಕಾರಣಕ್ಕೆ ತನ್ನಿಂದ ಸಾಲ ಪಡೆದ ದತ್ತಾತ್ರೇಯನ ಹೆಂಡತಿಯನ್ನೆ ಮಂಚಕ್ಕೆ ಕಳಸು ಅಂತಾ ಶಿವಾನಂದ ಹೇಳಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಕೊಲೆನಡೆಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೃಷ್ಣ ಎನ್ ಜಿ. ಸಂತೊಷ ಜಾದವ್ .ಉಮೇಶ ಅಂಬಿಗ. ನಾಗರಾಜ. ನಾಯ್ಕ.ಕುಮಟಾ ಸಿ.ಪಿ.ಅಯ್.ಸಂತೊಷ ಶೆಟ್ಟಿ.
ಪಿ.ಎಸ್.ಅಯ್.ಸಂತೊಷ ಕುಮಾರ ಗೋರ್ಕಣ ಈ ಕೊಲೆ ಪ್ರಕರಣವನ್ನ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.