ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವ್ಯಾಪಾರಿ ಕೇಂದ್ರವಾಗಿರುವ ಶಿರಸಿಗೆ ರೈಲು ಸಂಪರ್ಕ ಬರಬೇಕೆಂಬುದು ಇಲ್ಲಿನ ಜನತೆಯ ಬಹುದಿನದ ಕನಸಾಗಿತ್ತು.ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಬೆಳೆದಿರುವ ಶಿರಸಿಗೆ ರೈಲು ಸಂಪರ್ಕ ಇಲ್ಲದಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಸ್ವಲ್ಪ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಈಗ ಹಲ ದಶಕಗಳ ನಂತರ ಘಟ್ಟದ ಮೇಲಿನ ಜನತೆಯ ಹೆಬ್ಬಯಕೆ ಈಡೇರುವ ಹಂತಕ್ಕೆ ಬಂದಿರುವಂತೆ ತೋರುತ್ತಿದೆ.
ಹಾವೇರಿ-ಶಿರಸಿ ರೈಲು ಮಾರ್ಗದ ಟ್ರಾಫಿಕ್ ಸರ್ವೆ ಕುರಿತಾಗಿ, ಸೌಥ್ ವೆಸ್ಟರ್ನ್ ರೇಲ್ವೆ ಇಲಾಖೆಯು ತನ್ನ ಅಫಿಶಿಯಲ್ ವೆಬ್ಸೈಟ್ನಲ್ಲಿ ಪ್ರಕಟಿಸಿರುವುದು ಈಗ ಒಂದು ಹಂತಕ್ಕೆ ಹಸಿರು ನಿಶಾನೆ ದೊರಕಿದಂತಾಗಿದೆ.
ಹಾವೇರಿ-ಶಿರಸಿ ರೈಲು ಮಾರ್ಗದ ಟ್ರಾಫಿಕ್ ಸರ್ವೆ ವರದಿಗೆ ಅನುಮೋದನೆ ದೊರತಿದೆ. ಈ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಫಿಸಿಕಲ್ ಸರ್ವೆ ಮುಗಿದಿದ್ದು, ವರದಿಯು ಅಂತಿಮಗೊಳ್ಳುತ್ತಿದೆ ಎಂಬ ಅಧಿಕೃತ ಮಾಹಿತಿ ನಂಬಲರ್ಹ ಮೂಲದಿಂದ ತಿಳಿದುಬಂದಿದೆ.