ಕುಮಟಾ :ಶ್ರೀ ಕಾಂಚಿಕಾಂಬಾ ಯಕ್ಷಗಾನ ಮಂಡಳಿ ಬಾಡ ಗುಡೇಅಂಗಡಿ ಇವರು ಪ್ರತೀವರ್ಷವೂ ನವರಾತ್ರಿಯಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಈ ಸಂಧರ್ಭದಲ್ಲಿ ಪ್ರತಿದಿನವೂ ವಿವಿಧ ಯಕ್ಷಗಾನ ತಂಡಗಳು ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಿ ಜನಮನ ಗೆಲ್ಲುತ್ತಿವೆ.
ಈವರ್ಷ ದಿನಾಂಕ 13/10/2018 ರಂದು ಕಾಗಾಲದ ಶ್ರೀ ಶಕ್ತಿ ಶ್ರೀವೀರಮಾರುತಿ ಯಕ್ಷಗಾನಮಂಡಳಿಯ ಚಿಣ್ಣರು ಧರ್ಮಾಂಗದ ದಿಗ್ವಿಜಯ ಮತ್ತು ಗದಾಯುದ್ಧ 14/10/18 ಭಾನುವಾರ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಬಾಡ ಇವರು ಜಾಂಬವತಿ ಕಲ್ಯಾಣ 15/10/18 ಸೋಮವಾರ.
ಮಹಿಳಾಯಕ್ಷಗಾನ ತಂಡ ಗುಡೇ ಅಂಗಡಿ ಇವರು ಸುದರ್ಶನ ದಿಗ್ವಿಜಯ 16/10/18
ಮಂಗಳವಾರ ಮಕರಜ್ಯೋತಿ ಯಕ್ಷಗಾನ ತಂಡ ಮಾದರಿರಸ್ತೆ ಇವರು ರತ್ನಾವತಿಕಲ್ಯಾಣ
17/10/18 ಬುಧವಾರ ಶ್ರೀಕಾಂಚಿಕಾ ಯಕ್ಷಗಾನ ಮಂಡಳಿಯ ಚಿಣ್ಣರಿಂದ ಶರಸೇತುಬಂಧ ಹಾಗೂ ಕಂಸ ವಧೆ* ಪ್ರದರ್ಶನ ಯಶಸ್ವಿಯಾಗಿ ಜರುಗಿದ್ದು
ಇಂದು ಕೊನೆಯ ದಿನ ಅತಿಥಿಕಲಾವಿದರು ಹಾಗೂ ಸ್ಥಳೀಯ ಕಲಾವಿದರ ಮೇಳೈಸುವಿಕೆಯಲ್ಲಿ ಮಹಿಷಾಸುರ ಮರ್ಧಿನಿ ಎಂಬ ಅದ್ಧೂರಿಯ ಯಕ್ಷಗಾನ ಪ್ರದರ್ಶನ ನೆರವೇರಲಿದೆ.
ಮೇಳದ ಕಲಾವಿದರಾದ ನವೀನ್ ನಾಯ್ಕ ಇವರ ದೇವಿ ಹಾಗೂ ಹವ್ಯಾಸಿ ಕಲಾವಿದರಾದ ಶಿಕ್ಷಕ ಚಿದಾನಂದ ಭಂಡಾರಿ ಕಾಗಾಲ ಇವರ ಮಹಿಷಾಸುರ ಪಾತ್ರವು ಯಕ್ಷಗಾನದ ಕೇಂದ್ರಬಿಂದು ಆಗಿದೆ.
ದೇವೇಂದ್ರ ನಾಗಿ ಹಿರಿಯಕಲಾವಿದ ಬಂಗಾರಿ ಮಾಸ್ತರ,ವಿಷ್ಣುವಿನ ಪಾತ್ರದಲ್ಲಿ ನಿವೃತ್ತ ಉಪನ್ಯಾಸಕ ಬೀರಪ್ಪ ಗೌಡರು,ವಿದ್ಯುನ್ಮಾಲಿಯಾಗಿ ಬಾಡ ಗ್ರಾಪಂ ಉಪಾಧ್ಯಕ್ಷ ಉದ್ಯಮಿ ರವಿ ನಾಯ್ಕ, ಮಾಲಿನಿಯ ಪಾತ್ರದಲ್ಲಿ ಮಂಜುನಾಥ ನಾಯ್ಕ.ಸುಪಾರ್ಶ ಹಾಗೂ ಶಿವ ನಾಗಿ ರಾಘವೇಂದ್ರ ನಾಯ್ಕ ಕುಬೇರನಾಗಿ ನಾರಾಯಣ ಭಟ್ಟ ಗುಡೇಅಂಗಡಿ, ಹಾಸ್ಯಗಾರನಾಗಿ ಪಾಂಡು ಪಟಗಾರ ಕತಗಾಲ,ಬ್ರಹ್ಮನ ಪಾತ್ರದಲ್ಲಿ ಕುಮಾರಿ ಅಕ್ಷತಾ ಭಟ್ಟ, ಅಗ್ನಿಯ ಪಾತ್ರದಲ್ಲಿ ಹಕು ಪೂರ್ವಿ ಭಟ್ಟ, ಸಿಂಹನ ಪಾತ್ರದಲ್ಲಿ ಉತ್ತಮ ಪಟಗಾರ ಅಭಿನಯಿಸಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಜಿ ಆರ್ ಹೆಗಡೆ ಮೂರುರ ಹಾಗೂ ಗಣಪತಿ ನಾಯ್ಕ ಕೊಡಕಣಿ ಮೃದಂಗ ರಮೇಶ ನಾಯ್ಕ ಚಂಡೆ ಸುಕ್ರಪ್ಪ ನಾಯ್ಕ ಬಾಡ ಸಹಕರಿಸಲಿದ್ದಾರೆ.
ತಾಲೂಕ ಪಂಚಾಯತ ಸ್ಥಾಯಿಸಮಿತಿ ಅಧ್ಯಕ್ಷರಾದ ಜಗನ್ನಾಥ ನಾಯ್ಕ ಅವರ ಮುಂದಾಳತ್ವದಲ್ಲಿ ಜರುಗುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವತರಾದ ಕೃಷ್ಣಭಂಡಾರಿ ,ಸರ್ವೇಶ್ವರ ಹೆಗಡೆ ಮೂರೂರು ಜಿ ಎಲ್ ನಾಯ್ಕ ಮೊದಲಾದವರು ಪಾಲ್ಗೊಂಡು ಯಕ್ಷ ಷಷ್ಠಮಿಯ ಮೆರಗನ್ನು ಹೆಚ್ಚಿಸಿದ್ದಾರೆ.