ಶಿರಸಿ : ತಾಲೂಕಿನ ವಿವೇಕಾನಂದ ನಗರದ ವರಸಿದ್ಧಿವಿನಾಯಕ ದೇವಾಲಯ ದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಉಪನ್ಯಾಸ ಕಾರ್ಯಕ್ರಮ ಜರುಗಿತು. ಉಪನ್ಯಾಸಕರಾಗಿ ಆಗಮಿಸಿದ್ದ ಹೊನ್ನಾವರದ ಹೊಸಾಕುಳಿಯ ವಿದ್ವಾನ್ ಸಂದೀಪ.ಎಸ್.ಭಟ್ಟ ಇವರು ‘ನನ್ನದೆನ್ನುವುದೆಲ್ಲವೂ ನನ್ನದಲ್ಲ ‘ ಎನ್ನುವ ವಿಷಯದ ಕುರಿತು ತಮ್ಮ ವಾಗಝರಿ ಹರಿಸಿದರು.

ಜೀವನದಲ್ಲಿ ನನಗಾಗಿ ಎಂದೇ ಗಳಿಸಿಕೊಳ್ಳುತ್ತಾ ಸಾಗುವ ಮನುಷ್ಯನಿಗೆ ನನ್ನದೆನ್ನುವುದೆಲ್ಲವೂ ನನ್ನದಲ್ಲ ಎನ್ನುವ ಅರಿವೂ ಇರಬೇಕಾದ್ದು ಅಗತ್ಯ. ಭ್ರಮಾ ಲೋಕದಲ್ಲಿ ತೇಲಾಡುವ ಮನುಷ್ಯ ಗೀತೆಯ ಸಾರವನ್ನರಿತು ಬಾಳಬೇಕು. ನನ್ನದಲ್ಲ ಎಂದು ಇರುವವನಿಗೆ ಸಿಕ್ಕ ಹಣ, ಆಸ್ತಿ, ವಿದ್ಯೆ ,ಸಂಪತ್ತು ಪೂರ್ಣ ಆನಂದವನ್ನು ತರುತ್ತದೆ. ತನ್ನದು ಎನ್ನುವ ವ್ಯಾಮೋಹ ಇರುವವನಿಗೆ ಆಕಸ್ಮಿಕವಾಗಿ ಅದು ಕಳೆದು ಹೋದಾಗ ಅರಗಿಸಿಕೊಳ್ಳಲಾಗದ ಆಘಾತವಾಗುತ್ತದೆ. ನಾನು ಎನ್ನುವ ಅಹಂಕಾರವಿರದವನೇ ಸಮಾಜದ ಅತಿದೊಡ್ಡ ಶ್ರೀಮಂತ. ನಯ, ವಿನಯ, ಸೌಜನ್ಯ, ನಗು, ಆತ್ಮಪೂರ್ವಕ ನಡವಳಿಕೆ ಮಾತ್ರ ನಮ್ಮ ಹೆಸರನ್ನು ಬಹಳಕಾಲ ಹಸಿರಾಗಿಡಬಲ್ಲದು. ನಮಗೆ ಶೃದ್ಧೆಯ ಬಗೆಗೆ ಆಸಕ್ತಿ ಯಿರಲಿ. ಸ್ಪರ್ಧೆಯ ಬಗೆಗಲ್ಲ ಎಂಬುದನ್ನು ಹಲವು ನಿದರ್ಶನ, ಹಾಸ್ಯ, ಸುಭಾಷಿತಗಳ ಮೂಲಕ ಸಭಿಕರ ಮನಮಿಡಿಯುವಂತೆ ಮಾತನಾಡಿದ ಸಂದೀಪ ಭಟ್ಟರು ಸಿರಸಿಯ ಜನರ ಅಪಾರ ಅಭಿಮಾನ ಗಳಿಸುವಲ್ಲಿ ಯಶಸ್ವಿಯಾದರು.

RELATED ARTICLES  ಯಶಸ್ವಿಯಾಗಿ ಸಂಪನ್ನವಾಯಿತು ಸಾಂಸ್ಕøತಿಕ ಸೌರಭ 2018:ಜನ ಮನ ತಣಿಸಿದ ವೈವಿದ್ಯಮಯ ಕಾರ್ಯಕ್ರಮ

ಶ್ರೀಯುತ ಜಿ.ಟಿ.ಹೆಗಡೆ ಉಂಚೋಡಿಯವರು ಸ್ವಾಗತಿಸುತ್ತ, ನಮ್ಮ ಕರಾವಳಿಯಲ್ಲಿ ಎಸ್.ಎಸ್.ಎಲ್.ಸಿ ಆಗುವ ಹೊತ್ತಿಗೆ ಬದುಕಿನ ದಾರಿ ಹುಡುಕಬೇಕು ಅನ್ನುವ ಪರಿಸ್ಥಿತಿ. ಬೇರೆಯವರ ಅಡಿಕೆ ಅಂಗಳದಷ್ಟು ನಮ್ಮ ತೋಟವಿರುತ್ತದೆ. ಆದರೂ ತಮ್ಮ ವೃತ್ತಿಯ ಜೊತೆ ಪ್ರವೃತ್ತಿ ಬೆಳೆಸಿಕೊಂಡು ಸಮಾಜ ಮೆಚ್ಚುವ ರೀತಿಯಲ್ಲೇ ಬದುಕುತ್ತಾರೆ. ಸಂದೀಪ ಅಂತಹ ಒಬ್ಬ ತರುಣ ಪ್ರತಿಭಾನ್ವಿತ ಎಂದು ಪರಿಚಯಿಸಿದರು.

RELATED ARTICLES  ವೈಮನಸ್ಸನ್ನು ಬಿಟ್ಟು ಒಂದಾಗಿ ದುಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ: ಶಾಸಕಿ ರೂಪಾಲಿ ನಾಯ್ಕ

ಶ್ರೀಮತಿ ವಿಜಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಯುತ ಎಂ.ಎನ್. ಪ್ರಭುರವರು ವಂದಿಸಿದರು. ಶ್ರೀಯುತ ಎಸ್.ಎಸ್.ಭಟ್ಟ, ಶ್ರೀಯುತ ಡಿ.ಎಸ್.ನಾಯ್ಕ, ಮತ್ತಿತರ ಹಿರಿಯ ಸಾಹಿತಿಗಳು, ಚಿಂತಕರು, ನಾಗರಿಕರು, ಮಾತೃಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.