ಕಾರವಾರ: ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪರಿಷ್ಕರಣಾ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಅರ್ಜಿ ಆಹ್ವಾನಿಸಿದೆ.
ಮತದಾರರ ಪಟ್ಟಿಗಳ ಕರಡು ಪ್ರಕಟಣೆ ಮಾಡಿದ ದಿನಾಂಕ ಅ.10 ಹಕ್ಕು ಮತ್ತು ಆಕ್ಷೇಪಣಾ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸುವ ಸ್ವೀಕರಿಸುವ ಅವಧಿ ನ.20ರ ವರೆಗೆ. ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಇತ್ಯರ್ಥಪಡಿಸುವ ಕೊನೆಯ ಅವಧಿ ಡಿ. 20 ಮತ್ತು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆಯನ್ನು ಜ.4 ರಂದು ಪ್ರಕಟಿಸಲಾಗುವುದು.
ಕರಡು ಮತದಾರರ ಪಟ್ಟಿಗಳು ಎಲ್ಲಾ ಮತಗಟ್ಟೆಗಳಲ್ಲಿ ಗ್ರಾಮ ಪಂಚಾಯತ್, ಚಾವಡಿ, ನಗರ ಸಭೆ, ತಹಶೀಲ್ದಾರರು ಮತ್ತು ಸಹಾಯಕ ಕಮೀಶನರರ ಕಚೇರಿಗಳಲ್ಲಿ ಮತದಾರರ ಪರಿಶೀಲನೆಗೆ ಲಭ್ಯವಿರುತ್ತದೆ. ಮತದಾರರು ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ದಾಖಲು ಇಲ್ಲದೇ ಇದ್ದಲ್ಲಿ ದಿ.1-1-2019 ಕ್ಕೆ 18 ವರ್ಷ ಪೂರ್ಣಗೊಳ್ಳುವವರು ನಮೂನೆ 6 ಮತ್ತು 7 ರಲ್ಲಿ ವರ್ಗಾವಣೆಗೆ ನಿಗದಿತ ನಮೂನೆಯಲ್ಲಿ ಮಾಹಿತಿ ತುಂಬಿ, ಸಂಬಂಧಪಟ್ಟ ಮತಗಟ್ಟೆಗಳ ಬಿಎಲ್‍ಒ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆಗಳು ಹಾಗೂ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ತಾಲೂಕು ತಹಶೀಲ್ದಾರವರ ಕಚೇರಿಯ ಚುನಾವಣಾ ಶಾಖೆಯಿಂದ ಪಡೆದುಕೊಳ್ಳಬಹುದಾಗಿದೆ.