ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಶ್ರೀಲತಾ ಹೆಗಡೆ ಬಾಬಾ ಅಟೋಮಿಕ ರಿಸರ್ಚ ಸೆಂಟರ್ ಮುಂಬಯಿ ನಡೆಸಿದ ‘ಲೇಸರ್ ಮತ್ತು ಮನುಕುಲಕ್ಕೆ ಅದರಿಂದಾದ ಪರಿಣಾಮ’ ಎಂಬ ವಿಷಯದಲ್ಲಿ ನಡೆಸಿದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯ ಪೂರ್ವಭಾವಿಯಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈಕೆ ಭಟ್ಕಳದ ಜನತಾ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಅಶೋಕ ಹೆಗಡೆ ಹಾಗೂ ರೂಪಾ ಹೆಗಡೆ ದಂಪತಿಯ ಪುತಿಯಾಗಿದ್ದಾರೆ.
ಇವರ ಸಾಧನೆಗೆ ಸಂಸ್ಥೆಯ ಸಿಬ್ಬಂಧಿ ವರ್ಗ, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಇವರ ಭವಿಷ್ಯ ಉಜ್ವಲವಾಗಲೆಂದು ಸತ್ವಾಧಾರ ಬಳಗ ಹಾರೈಸಿದೆ.