ಭಟ್ಕಳ: ತಾಲೂಕಿನ ಪುಣ್ಯ ಕ್ಷೇತ್ರ ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಾಲಯದ ನವರಾತ್ರಿ ಉತ್ಸವದ ಒಂಬತ್ತನೆ ದಿನ ಉಮೇಶ ಮುಂಡಳ್ಳಿ ನೇತೃತ್ವದ ನಿನಾದ ಸಾಹಿತ್ಯ ಸಂಗೀತ ಸಂಚಯದ ಭಟ್ಕಳದವರಿಂದ ಭಕ್ತಿಲಹರಿ ಸುಗಮ ಸಂಗೀತ ಕಾರ್ಯಕ್ರಮ ಗುರುವಾರ ನಡೆಯಿತು.
ನವರಾತ್ರಿಯ ದಿನ ಸಂಜೆ ಆರುಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೂ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಹಾಗೂ ಸಹಗಾಯಕರು ಅನೇಕ ಭಕ್ತಿಗೀತೆಗಳೊಂದಿಗೆ, ಭಾವಗೀತೆ, ದೇಶಭಕ್ತಿ ಗೀತೆಗಳನ್ನೂ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

RELATED ARTICLES  ಹೊನ್ನಾವರ ಎಸ್.ಡಿ.ಎಂ ಕಾಲೇಜಿನಲ್ಲಿ ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮ.

ಈ ಸಂದರ್ಭದಲ್ಲಿ ಗಾಯಕ ಉಮೇಶ ಮುಂಡಳ್ಳಿಯವರನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಂಡಳ್ಳಿಯವರೊಂದಿಗೆ ಅಣ್ಣಪ್ಪ ದೇವಾಡಿಗ ಚಿತ್ರಾಪುರ, ಕುಮಾರಿ ಸಂತೋಷಿ ಕಾಮತ್ ಹಾಡಿದರು. ತಬಲಾದಲ್ಲಿ ವಿನೋದ ಭಂಡಾರಿ ಕಡತೋಕಾ, ಹಾರ್ಮೀನಿಯಂ ನಲ್ಲಿ ಪರಮೇಶ್ವರ ಹೆಗಡೆ ಸಹಕರಿಸಿದರು.

RELATED ARTICLES  ಸಮುದ್ರದಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಿದ ಸಿಬ್ಬಂದಿ.